ಶಿವಮೊಗ್ಗದಲ್ಲಿ ಮತ್ತೆ ಶತಕ ದಾಟಿದ ಕೋವಿಡ್ ಸಕ್ರಿಯ ಪ್ರಕರಣ, ಶುರುವಾಯ್ತು ಟೆನ್ಶನ್, ಶಿಕ್ಷಣ ಸಂಸ್ಥೆಯಲ್ಲೇ ಹೆಚ್ಚು ಕೇಸ್

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ನಿರಂತರ ಇಳಿಕೆಯಾಗುತ್ತಿದ್ದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 107 ಸಕ್ರಿಯ ಪ್ರಕರಣಗಳಿವೆ.
30ರೊಳಗೆ ಇಳಿಕೆ ಕಂಡಿದ್ದ ಸಕ್ರಿಯ ಪ್ರಕರಣಗಳು ಮರು ಏರಿಕೆಯಾಗುತ್ತಿದ್ದು, ಜನರು ಮತ್ತು ಆರೋಗ್ಯ ಇಲಾಖೆಗಳಲ್ಲಿ ಟೆನ್ಶನ್ ಶುರುವಾಗಿದೆ.

ಜಿಲ್ಲಾಡಳಿತವು ಗುರುವಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ 28 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಭದ್ರಾವತಿ ತಾಲೂಕಿನಲ್ಲಿ ಅತಿ ಹೆಚ್ಚು 24 ಕೊರೊನಾ ಪಾಸಿಟಿವ್ ದೃಢಪಟ್ಟಿವೆ. ತೀರ್ಥಹಳ್ಳಿಯಲ್ಲಿ 1, ಶಿಕಾರಿಪುರದಲ್ಲಿ 2, ಸಾಗರದಲ್ಲಿ 1 ಪ್ರಕರಣಗಳು ಕಂಡುಬಂದಿವೆ. 8 ಜನ ಗುಣಮುಖರಾಗಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲೇ 27 ಜನರಲ್ಲಿ ಪಾಸಿಟಿವ್ ಬಂದಿದ್ದು, 1,494 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಭದ್ರಾವತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಪಾಸಿಟಿವ್ ಬಂದಿದೆ. ಈ ಕಾರಣಕ್ಕೆ ಅವರ ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
107 ಸಕ್ರಿಯ ಪ್ರಕರಣಗಳು
ಸೋಂಕಿತರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ 76, ಹೋಮ್ ಐಸೋಲೇಷನ್ ನಲ್ಲಿ 19 ಸೇರಿ ಒಟ್ಟು 107 ಸಕ್ರಿಯ ಪ್ರಕರಣಗಳಿವೆ.

https://www.suddikanaja.com/2021/09/13/opposition-to-national-education-policy/