ವಿಧಾನ ಪರಿಷತ್ ಚುನಾವಣೆಗೆ ಬಿಗಿ ಪೊಲೀಸ್ ಭದ್ರತೆ, ಎಷ್ಟು ವಾಹನ, ಸಿಬ್ಬಂದಿ ನಿಯೋಜನೆ?

 

 

ಸುದ್ದಿ ಕಣಜ.ಕಾಂ | DISTRICT | MLC ELECTION
ಶಿವಮೊಗ್ಗ: ರಾಜ್ಯ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
338 ಪೊಲೀಸರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಎ.ಎಸ್.ಐ, ಪಿ.ಎಸ್.ಐ ನೇತೃತ್ವದಲ್ಲಿ 30 ಸೆಕ್ಟರ್ ಹಾಗೂ 12 ಮೇಲ್ವಿಚಾರಣೆ ಉಸ್ತುವಾರಿಗಳಿಗೆ ನಿಯೋಜಿಸಲಾಗಿದೆ. ಡಿಎಆರ್ 10, ಕೆಎಸ್.ಆರ್.ಪಿ 2 ತುಕ್ಕಡಿಗಳು ಚುನಾವಣೆ ಕೆಲಸದಲ್ಲಿ ಕಾರ್ಯನಿರ್ವಹಿಸಲಿವೆ. ಸೂಕ್ಷ್ಮ ಪ್ರದೇಶಗಳಿಗೆ ಅನುಗುಣವಾಗಿ 70 ಪಾಯಿಂಟ್ ಗುರುತಿಸಲಾಗಿದೆ.

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮತದಾರರ ಸಂಖ್ಯೆ
ತಾಲೂಕು ಪುರುಷ ಮಹಿಳೆ ಒಟ್ಟು
ಸೊರಬ 295 24 319
ಶಿಕಾರಿಪುರ 259 243 502
ಹೊನ್ನಾಳಿ 169 175 344
ನ್ಯಾಮತಿ 103 87 190
ಚನ್ನಗಿರಿ 365 396 761
ಭದ್ರಾವತಿ 225 254 479
ಶಿವಮೊಗ್ಗ 237 265 502
ಸಾಗರ 204 215 419
ಹೊಸನಗರ 148 163 311
ತೀರ್ಥಹಳ್ಳಿ 170 183 353

365 ಮತಗಟ್ಟೆಗಳಲ್ಲಿ ಮತ ಚಲಾವಣೆ
ಒಟ್ಟು 365 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಪ್ರತಿ ಮತಗಟ್ಟೆಯಲ್ಲಿ ತಲಾ ಮೂರು ಮಂದಿ ಚುನಾವಣೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಮೈಕ್ರೋ ಅಬ್ಸರೋರ್ವರ್ ಹಾಗೂ ಒಬ್ಬ ಪೆÇಲೀಸ್ ಸಿಬ್ಬಂದಿ ಸುಗಮ ಮತದಾನಕ್ಕೆ ನೆರವಾಗಲಿದ್ದಾರೆ.

ಪ್ರತಿ ಮತಗಟ್ಟೆಯಲ್ಲಿ ವಿಡಿಯೋಗ್ರಾಫರ್ ನಿಯೋಜಿಸಲಾಗಿದೆ. ಮಸ್ಟರಿಂಗ್ ಕಾರ್ಯ ಮುಗಿದ ಬಳಿಕ ಚುನಾವಣಾ ಸಿಬ್ಬಂದಿಯನ್ನು ತಾಲೂಕುಗಳಿಗೆ ಕರೆದೊಯ್ಯಲು 38 ಬಸ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ 13 ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ. ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

4,164 ಅರ್ಹ ಮತದಾರರು
ಒಟ್ಟು 4,164 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 1,983 ಪುರುಷ ಹಾಗೂ 2,181 ಮಹಿಳಾ ಮತದಾರರು ಇದ್ದಾರೆ. 93 ಅನಕ್ಷರಸ್ಥ ಮತದಾರರು ಜತೆಗಾರರ ನೆರವಿನೊಂದಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ. ಸೊರಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮತದಾರರು, ಶಿಕಾರಿಪುರ ಪಟ್ಟಣ ಪಂಚಾಯಿತಿ 30, ಹೊನ್ನಾಳಿ ಪುರಸಭೆ 22, ಚೆನ್ನಗಿರಿ ಪಟ್ಟಣ ಪಂಚಾಯಿತಿ 29, ಭದ್ರಾವತಿ ನಗರಸಭೆ 37, ಶಿವಮೊಗ್ಗ ಮಹಾನಗರ ಪಾಲಿಕೆ 45, ಸಾಗರ ನಗರಸಭೆ 37, ಹೊಸನಗರ ಪಟ್ಟಣ ಪಂಚಾಯತ್ 14, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ 16 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.
ಸೊರಬ ತಾಲೂಕಿನಲ್ಲಿ 304 ಗ್ರಾಮ ಪಂಚಾಯಿತಿ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿಕಾರಿಪುರ 470, ಹೊನ್ನಾಳಿ 321, ನ್ಯಾಮತಿ 190, ಚನ್ನಗಿರಿ 730, ಭದ್ರಾವತಿ 431, ಶಿವಮೊಗ್ಗ 456, ಸಾಗರ 379, ಹೊಸನಗರ 294, ತೀರ್ಥಹಳ್ಳಿ ತಾಲೂಕಿನಲ್ಲಿ 335 ಗ್ರಾಪಂ ಸದಸ್ಯರು ಇದ್ದಾರೆ.

https://www.suddikanaja.com/2021/11/10/code-of-conduct-enforce-in-shivamogga-due-to-mlc-election/

error: Content is protected !!