ಕಳೆದ 20 ದಿನಗಳಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತ, ಚಿಕಿತ್ಸೆಗಾಗಿ 70 ಕಿ.ಮೀ ಪ್ರಯಾಣ!

ಸುದ್ದಿ ಕಣಜ.ಕಾಂ | TALUK | CITIZEN VOICE
ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ನಿವಾಸಿಗಳು ಹೋರಾಟ ನಡೆಸಿಯೇ ಪ್ರತಿ ಸೌಲಭ್ಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ಹಲವು ತಿಂಗಳುಗಳಿಂದ ಆಂಬ್ಯುಲೆನ್ಸ್ ( Ambulance) ಕಾಣೆಯಾಗಿದೆ. ಈ ಬಗ್ಗೆ ಸ್ಥಳೀಯರು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕಿನ ಕರೂರು (karuru) ಮತ್ತು ಬಾರಂಗಿ (Bharangi) ಹೋಬಳಿಯ ಜನರು ಸಂಕಷ್ಟದಲ್ಲಿದ್ದು, ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಈ ಭಾಗದಲ್ಲಿ ಕಳೆದ 20 ದಿನದಿಂದ ಸ್ಥಳೀಯ ಆರೋಗ್ಯ ಕೇಂದ್ರ(Health center) ದಲ್ಲಿ ಆಂಬ್ಯುಲೆನ್ಸ್ ಕಾಣೆಯಾಗಿದೆ.

READ | ಗರಿಗೆದರಿದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ, ಅಭ್ಯರ್ಥಿಗಳೆಷ್ಟು, ಎಲ್ಲೆಲ್ಲಿ ಮತಗಟ್ಟೆ, ಇಲ್ಲಿದೆ ಪೂರ್ಣ ವಿವರ

ಸಂಜೆ 6 ಗಂಟೆಯ ನಂತರ ಲಾಂಚ್ ಸ್ಥಗಿತಗೊಂಡ ಬಳಿಕ ಹಿನ್ನೀರು ಜನರು ಸಂಪೂರ್ಣವಾಗಿ ತಾಲೂಕಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಇದರಿಂದ ತುರ್ತು ಸಂದರ್ಭದಲ್ಲಿ ಸಾಗರ ತಾಲೂಕು ಆಸ್ಪತ್ರೆಗೆ ಹೋಗಬೇಕಾದ ಮಾರ್ಗ ಸಂಪೂರ್ಣ ಬಂದ್​ ಆಗಲಿದೆ.
70 ಕಿ.ಮೀ. ಅಂತರದ ಪಯಣ
ಇನ್ನು ಸಾಗರ ತಾಲೂಕು ಆಸ್ಪತ್ರೆಗೆ ತೆರಳಲು ನಿಟ್ಟೂರು- ಹೊಸನಗರ ಅಥವಾ ಕೋಗಾರ್- ಕಾರ್ಗಲ್ ಪರ್ಯಾಯ ಮಾರ್ಗವಿದ್ದು, ಇದು ಬಹಳ ಅಪಾಯಕಾರಿ ಹಾಗೂ ದುಬಾರಿ ವೆಚ್ಚದ ಮಾರ್ಗವಾಗಿದ್ದು 70 ಕಿ.ಮೀ ಅಂತರದಲ್ಲಿದೆ. ತುರ್ತು ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ನೂರಾರು ಕಿ.ಮೀ ಸಂಚರಿಸಬೇಕಾದ ಅನಿವಾರ್ಯತೆ ಇದೆ.

READ | 7 ದಿನಗಳಲ್ಲಿ 3,350 ಕಿ.ಮೀ ಸೈಕ್ಲಿಂಗ್ ಪಯಣಿಸಿ ಇತಿಹಾಸ ಸೃಷ್ಟಿಸಿದ ಶಿವಮೊಗ್ಗ ಪ್ರತಿಭೆ 

ಈಗಾಗಲೇ ತುಮರಿ (Tumari) ಪ್ರಾಥಮಿಕ ಆರೋಗ್ಯ ಕೇಂದ್ರ(PHC)ದಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸುವಂತೆ ಹಾಗೂ ಆಂಬ್ಯುಲೆನ್ಸ್ ಸೇವೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತುಮರಿಯಂತಹ ಭೌಗೋಳಿಕ ಪ್ರದೇಶ (geographical area) ದಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಅಸಡ್ಡೆ ಧೋರಣೆ ಅನುಸರಿಸುತ್ತಿದೆ. ದ್ವೀಪದ ಜನರಿಗೆ ಸಂಜೆ ಲಾಂಚ್ ಸೇವೆ ಮುಗಿದ ನಂತರ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಹಿಂದೆ ಸರ್ಕಾರ ನೀಡಿರುವ ಆಂಬ್ಯುಲೆನ್ಸ್ ದುರ್ಬಲವಾಗಿದ್ದು. ಜನತೆಗೆ ವೆಂಟಿಲೇಟರ್ (Ventilator) ಇರುವ ಆಂಬ್ಯುಲೆನ್ಸ್ ಜಿಲ್ಲಾಡಳಿತ (district administration) ನೀಡುವಂತೆ ಕರೂರು ಬಾರಂಗಿ ಹೋಬಳಿಯ ಜನತೆಯ ಒತ್ತಾಯವಾಗಿದೆ.
ಈ ಭಾಗದಲ್ಲಿ ಜನಸಾಮಾನ್ಯರಿಗೆ ತುರ್ತು ಸೇವೆಗೆ ಸದಾ ಸಿದ್ಧವಿರಬೇಕಾದ ವಾಹನದ ಕಳೆದ 20 ದಿನದಿಂದ ಸೇವೆಗೆ ಇಲ್ಲದಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಇದ್ದ ತುಮರಿ ಆಂಬ್ಯುಲೆನ್ಸ್ ವಾಹನವು ದುಸ್ಥಿತಿಯಿಂದ ಕೂಡಿದೆ.
ಪದೇ ಪದೆ‌‌ ಆಂಬ್ಯುಲೆನ್ಸ್ ರಿಪೇರಿಗೆ ಬರುತ್ತಿದ್ದು ಹಲವು ಅವಘಡಕ್ಕೆ ಕಾರಣವಾಗಿದೆ. ಈ ಬಗ್ಗೆ ತುರ್ತಾಗಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಿದೆ. ಸುಮಾರು 25 ಸಾವಿರ ಜನಸಂದಣಿ ಇರುವ ತುಮರಿಯಂತಹ ಭೌಗೋಳಿಕ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಅಸಡ್ಡೆ ಧೋರಣೆ ಅನುಸರಿಸುತ್ತಿದೆ ಎಂಬುವುದು ಸ್ಥಳೀಕಮಯರ ಆಕ್ರೋಶ.
ವರದಿ‌ | ಎಂ.ಸುಕುಮಾರ್

https://www.suddikanaja.com/2021/09/25/ambulance-service-collapsed/