ಶಿವಮೊಗ್ಗ – ತುಮಕೂರು ನಡುವೆ ಹೊಸ ರೈಲು ಸಂಚಾರ, ಎಷ್ಟು ಬೋಗಿ, ಯಾವಾಗಿಂದ ಆರಂಭ, ಎಲ್ಲೆಲ್ಲಿ ನಿಲುಗಡೆ

 

 

ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ. ಶಿವಮೊಗ್ಗ- ತುಮಕೂರು (Shivamogga-Tumkur) ನಡುವೆ ಸಾರ್ವಜನಿಕರ ಸಂಚಾರ ಹೇರಳವಾಗಿರುವುದರಿಂದ ಅನುಕೂಲಕ್ಕಾಗಿ ಹೊಸ ರೈಲು ಸಂಚಾರ ಆರಂಭಿಸಲಾಗುತ್ತಿದೆ.
ಶಿವಮೊಗ್ಗ-ತುಮಕೂರು ನಡುವೆ ಪ್ಯಾಸೆಂಜರ್ ರೈಲು ಸಂಚಾರ ಡಿಸೆಂಬರ್ 13ರಿಂದ ಆರಂಭವಾಗಲಿದ್ದು, ಎರಡು ಪ್ರಮುಖ ನಗರಗಳ ನಡುವೆ ಸಂಪರ್ಕ ಸಾಧ್ಯವಾಗಲಿದೆ.
ರೈಲಿನಲ್ಲಿ ಒಟ್ಟು 12 ಬೋಗಿಗಳು ಇರಲಿವೆ. 10 ಸಾಮಾನ್ಯ, ಲಗೇಜ್ ಕಂ ಬ್ರೇಕ್ ವ್ಯಾರಲಿವೆ. ಜೊತೆಗೆ ಪ್ಯಾಸೆಂಜರ್ ರೈಲಿನಲ್ಲಿ ಮುಂಚೆಯೇ ಸೀಟುಗಳನ್ನು ಕಾಯ್ದಿರಿಸುವ ವ್ಯವಸ್ಥೆ ಇಲ್ಲ ಎಂದು ತಿಳಿಸಲಾಗಿದೆ.

ಹೊಸ ರೈಲಿನ ವೇಳಾಪಟ್ಟಿ

ತುಮಕೂರು-ಶಿವಮೊಗ್ಗ (ರೈಲು ಸಂಖ್ಯೆ 06591) ರೈಲು ಡಿಸೆಂಬ್ 13ರಂದು ಸಂಜೆ 6.40 ಗಂಟೆಗೆ ತುಮಕೂರಿನಿಂದ ಹೊರಟು ಶಿವಮೊಗ್ಗಕ್ಕೆ ರಾತ್ರಿ 11.50 ಗಂಟೆಗೆ ತಲುಪಲಿದೆ. ತುಮಕೂರು, ಹೆಗ್ಗೆರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀಶಾರದಾನಗರ ಹಾಲ್ಟ್, ಹೊನ್ನವಳ್ಳಿ ರೋಡ್, ಆದಿಹಳ್ಳಿ, ಅರಸೀಕೆರೆ, ಬಾಣವರ, ದೇವನೂರು, ಬಳ್ಳೇಕೆರೆ ಹಾಲ್ಟ್, ಕಡೂರು, ಬೀರೂರು, ಶಿವಪುರ, ಕೋರನಹಳ್ಳಿ, ತರೀಕೆರೆ, ಮಸರಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಲ್ಟ್, ಶಿವಮೊಗ್ಗ ಟೌನ್‍ಗೆ ತಲುಪಲಿದೆ.
ಶಿವಮೊಗ್ಗದಿಂದ ತುಮಕೂರು (ರೈಲು ಸಂಖ್ಯೆ 06592) ಡಿಸೆಂಬರ್ 14ರಿಂದ ಆರಂಭವಾಗಲಿದೆ. ಅಂದು ಬೆಳಗ್ಗೆ 4 ಗಂಟೆಗೆ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ರೈಲು ಬೆಳಗ್ಗೆ 9.45 ಗಂಟೆಗೆ ತುಮಕೂರು ತಲುಪಿಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

ಹೊಸ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ
ರೈಲು ಸಂಖ್ಯೆ. 06591  ತುಮಕೂರು – ಶಿವಮೊಗ್ಗ ಟೌನ್ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್  (ದಿನಾಂಕ 13.12.2021 ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ವರೆಗೂ ಅನ್ವಯ)

ನಿಲ್ದಾಣ

ರೈಲು ಸಂಖ್ಯೆ. 06592  ಶಿವಮೊಗ್ಗ ಟೌನ್ – ತುಮಕೂರು ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ (ದಿನಾಂಕ 14.12.2021 ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ವರೆಗೂ ಅನ್ವಯ)
ವೇಳೆ ವೇಳೆ
(ಆಗಮನ / ನಿರ್ಗಮನ) (ಆಗಮನ / ನಿರ್ಗಮನ)
6:40 PM ತುಮಕೂರು 09.25 AM
 06:46 PM / 06:47 PM ಹೆಗ್ಗೆರೆ ಹಾಲ್ಟ್ 08:38 AM / 08.39 AM
06:52 PM / 06:53 PM ಮಲ್ಲಸಂದ್ರ 08:27 AM / 08.28 AM
07:01 PM / 07:02 PM ಗುಬ್ಬಿ 08:18 AM / 08.19 AM
07:12 PM / 07:13 PM ನಿಟ್ಟೂರು 08:09 AM / 08.10 AM
07:30 PM / 07:31 PM ಸಂಪಿಗೆ ರೋಡ್ 08:00 AM / 08.01 AM
07:36 PM / 07:37 PM ಅಮ್ಮಸಂದ್ರ 07:53 AM / 07.54 AM
07:43 PM / 07:44 PM ಬಾಣಸಂದ್ರ 07:46 AM / 07.47 AM
07:49 PM / 07:50 PM ಅರಳಗುಪ್ಪೆ 07:39 AM / 07.40 AM
07:55 PM / 07:56 PM ಕರಡಿ 07:33 AM / 07.34 AM
08:00 PM / 08:01 PM ಬನಶಂಕರಿ ಹಾಲ್ಟ್ 07:27 AM / 07.28 AM
08:08 PM / 08:10 PM ತಿಪಟೂರು 07:20 AM / 07.22 AM
08:15 PM / 08:16 PM ಶ್ರೀಶಾರದಾನಗರ ಹಾಲ್ಟ್ 06:56 AM / 06.57 AM
08:25 PM / 08:26 PM ಹೊನ್ನವಳ್ಳಿ ರೋಡ್ 06:46 AM / 06.47 AM
08:31 PM / 08:32 PM ಆದಿಹಳ್ಳಿ 06:39 AM / 06.40 AM
08:45 PM / 08:50 PM ಅರಸೀಕೆರೆ 06:25 AM / 06.30 AM
09:05 PM / 09:06 PM ಬಾಣವರ 05:59 AM / 06.00 AM
09:15 PM / 09:16 PM ದೇವನೂರು 05:49 AM / 05.50 AM
09:26 PM / 09:27 PM ಬಳ್ಳೇಕೆರೆ ಹಾಲ್ಟ್ 05:39 AM / 05.40 AM
09:35 PM / 09:37 PM ಕಡೂರು 05:28 AM / 05.30 AM
09:48 PM / 09:50 PM ಬೀರೂರು 05:18 AM / 05.20 AM
10:03 PM / 10:04 PM ಶಿವಪುರ 05.03 AM / 05.04 AM
10:09 PM / 10:10 PM ಕೋರನಹಳ್ಳಿ 04.56 AM / 05.57 AM
10:20 PM / 10:22 PM ತರೀಕೆರೆ 04.46 AM / 04.48 AM
10:37 PM / 10:38 PM ಮಸರಹಳ್ಳಿ 04.31 AM / 04.32 AM
11:18 PM / 11:20 PM ಭದ್ರಾವತಿ 04.23 AM / 04.25 AM
11:34 PM / 11:35 PM ಶಿವಮೊಗ್ಗ ಹಾಲ್ಟ್ 04.05 AM / 04.06 AM
11:50 PM ಶಿವಮೊಗ್ಗ ಟೌನ್ 4:00 AM

https://www.suddikanaja.com/2021/01/24/ksrtc-conductor-refused-to-take-5-rupees-note-cut-1-thousand-in-salary/

error: Content is protected !!