ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ರಾತ್ರಿ 10ರೊಳಗೆ ಮನೆ ಸೇರದಿದ್ದರೆ ಬೀಳುತ್ತೆ ಕೇಸ್

 

 

ಸುದ್ದಿ ಕಣಜ.ಕಾಂ | CITY | NEW YEAR CELEBRATION
ಶಿವಮೊಗ್ಗ: ಹೊಸ ವರ್ಷಾಚರಣೆಗೆ ಶಿವಮೊಗ್ಗದಲ್ಲಿ ತಡೆಬಿದ್ದಿದೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆಯ ನಂತರ ಹೊರಗೆ ಬರುವಂತಿಲ್ಲ. ಒಂದುವೇಳೆ, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ಬಂದರೆ ಕೇಸ್ ಬೀಳಲಿದೆ.
ಓಮಿಕ್ರಾನ್ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದರ ಅನುಷ್ಠಾನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ರಾತ್ರಿ 10ರ ಬಳಿಕ ನೈಟ್ ಕರ್ಫ್ಯೂ ಇರುವುದರಿಂದ ಯಾರೂ ಸೇರುವಂತಿಲ್ಲ. ಹೊಸ ವರ್ಷವೇನಿದ್ದರೂ ಮನೆಯಲ್ಲಿಯೇ ಆಚರಿಸಬೇಕೇ ವಿನಹ ಸಾರ್ವಜನಿಕವಾಗಿ ಯಾವ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ರಾತ್ರಿ 12 ಗಂಟೆ ಮಾಡುವ ಪಾರ್ಟಿಗೂ ಬ್ರೇಕ್ ಬಿದ್ದಿದೆ.

ಹೋಟೆಲ್, ಬಾರ್, ರೆಸ್ಟೋರೆಂಟ್ ಬಂದ್
ಡಿಸೆಂಬರ್ 31ರ ರಾತ್ರಿ 10 ಗಂಟೆಯ ಬಳಿಕ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಂಭ್ರಮಾಚರಣೆ ಮಾಡುವಂತಿಲ್ಲ. ಹೋಟೆಲ್, ಬಾರ್, ರೆಸ್ಟೋರೆಂಟ್ ಬಂದ್ ಇರಲಿದ್ದು, ವ್ಯಾಪಾರ ವಹಿವಾಟು ಇರುವುದಿಲ್ಲ.
ಸಂಜೆ 7.30 ಗಂಟೆಗೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಅನೌನ್ಸ್ ಮೆಂಟ್ ಮಾಡಲಾಗುವುದು. ರಾತ್ರಿ 9.30ಕ್ಕೆ ವ್ಯಾಪಾರ ಸ್ಥಗಿತಗೊಳಿಸಬೇಕು ಎಂದು ಎಸ್.ಪಿ. ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಅಗತ್ಯ ಸೇವೆಗೆ ಪಾಸ್, ಪೂರಕ ತೋರಿಸಿದರೆ ಮಾತ್ರ ಸಂಚರಿಸುವುದಕ್ಕೆ ಅವಕಾಶ ನೀಡಲಾಗುವುದು. ಮದ್ಯಪಾನ ಮಾಡಿ ವಾಹನ ಚಾಲನೆ ಇತ್ಯಾದಿಗಳನ್ನು ಮಾಡಿದ್ದಲ್ಲಿ ಮುಲಾಜಿಲ್ಲದೇ ಅವರ ವಿರುದ್ಧ ಖಡಕ್ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

https://www.suddikanaja.com/2021/05/07/mayor-raid-on-restaurant/

error: Content is protected !!