BREAKING NEWS | ಗಾಂಜಾ ಸೇವಿಸಿದ 8 ಜನ ಅರೆಸ್ಟ್, ಬಂಧಿತ ಬಳಿ‌ ಸಿಕ್ಕ ಗಾಂಜಾವೆಷ್ಟು?

 

 

ಸುದ್ದಿ ಕಣಜ.ಕಾಂ‌| TALUK | CRIME NEWS
ಶಿರಾಳಕೊಪ್ಪ (ಶಿಕಾರಿಪುರ): ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತಿದ್ದ ಎಂಟು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಂಟು ಜನ ಬಂಧಿತರ ಪಟ್ಟಿ
ಶಿರಾಳಕೊಪ್ಪ ಪಟ್ಟಣದ ಹಳ್ಳೂರು ಕೇರಿಯ ಎರಡನೇ ಕ್ರಾಸ್ ನಿವಾಸಿ‌‌ ಶುಂಠಿ ವ್ಯಾಪಾರಿ ತೌಸಿಫ್ ಖಾನ್ (24), ಮೇದಾರ ಕೇರಿಯ ಅಕಿಯಾಜ್ (50),ಶಿರಾಳಕೊಪ್ಪ ಪಟ್ಟಣದ ಸ್ಟಾಟಿನ್ ರಾಹುಲ್ ಡಿಸೋಜ (25),ಭೋವಿ ಕಾಲೊನಿ ಎರಡನೇ ಕ್ರಾಸ್ ನಿವಾಸಿ ನಿಯಾಜವುಲ್ಲಾ (24), ಹಳ್ಳೂರು ಕೇರಿಯ ನೂರುಲ್ಲಾ (50), ಮೂರನೇ ಕ್ರಾಸ್ ನಿವಾಸಿ ಶೌಕತ್ ಆಲಿ (42), ಪಂಪ್ ಹೌಸ್ ಐದನೆ ಕ್ರಾಸ್ ನಿವಾಸಿ ವಾಜೀದ್ (47) ಭೋವಿ ಕಾಲೊನಿಯ ಒಂದನೇ ಕ್ರಾಸ್ ನಿವಾಸಿ ತೌಫಿಕ್ (20) ಎಂಬುವವರನ್ನು ಬಂಧಿಸಲಾಗಿದೆ.

READ | ದನಗಳ್ಳರಿಂದ ಹಿಟ್ ಆ್ಯಂಡ್ ರನ್ ಕೇಸ್, ಇಬ್ಬರು ಅರೆಸ್ಟ್

ಪೊಲೀಸರ ಕಾರ್ಯಾಚರಣೆ
ಶಿರಾಳಕೊಪ್ಪ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿ ಸಾಮಾಜಿಕ‌ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ‌ಪೊಲೀಸ್ ಠಾಣೆ ಪಿಎಸ್.ಐ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಂತರ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಪಿಗಳಿಂದ 230 ಗ್ರಾಂ ಗಾಂಜಾ ಮತ್ತು 25,000 ಬೆಲೆ ಬಾಳುವ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

https://www.suddikanaja.com/2021/08/05/accused-arrested-for-selling-ganja-in-public-place/

error: Content is protected !!