ಪೊಲೀಸ್ ಸರ್ಪಗಾವಲಿನಲ್ಲಿ ಕೆಳದಿ ವಂಶಸ್ಥರ ಸಮಾಧಿಗೆ ಫೆನ್ಸಿಂಗ್

 

 

ಸುದ್ದಿ‌ ಕಣಜ.ಕಾಂ | DISTRICT | RELIGIOUS
ಶಿವಮೊಗ್ಗ: ಪೊಲೀಸರ ಸರ್ಪಗಾವಲಿನಲ್ಲಿ ನಗರದ ನ್ಯೂಮಂಡ್ಲಿಯಲ್ಲಿರುವ ಕೆಳದಿ (keladi) ವಂಶಸ್ಥರದ್ದು ಎನ್ನಲಾದ ಸಮಾಧಿಯನ್ನು ಶನಿವಾರ ಸ್ವಚ್ಛಗೊಳಿಸಲಾಯಿತು. ಜೊತೆಗೆ, ಈ ಜಾಗಕ್ಕೆ ಬೇಲಿ ಹಾಕುವ ಕೆಲಸವನ್ನೂ ಮಾಡಲಾಯಿತು.

READ | ರಾಜ್ಯದಲ್ಲಿ ಒಮಿಕ್ರಾನ್ ದಾಳಿ, ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತದಿಂದ ಕೆಳದಿ ವಂಶಸ್ಥ ಸೋಮಶೇಖರ್ ನಾಯಕ ಮತ್ತು ಅವರ ಮಡದಿಯ ಸಮಾಧಿ ಸ್ಥಳವನ್ನು ರಕ್ಷಿಸುವ ಉದ್ದೇಶದಿಂದ ಈ ಸ್ಥಾನದಲ್ಲಿ‌ ಬೆಳೆದ ಗಿಡಗಳನ್ನು ತೆರವುಗೊಳಿಸಲಾಯಿತು.
ಸಮಾಧಿಗಳಿರುವ ಜಾಗದ ಸ್ವಚ್ಚತೆ ಮಾಡುವಾಗ ಮುಸ್ಲಿಂ‌ ಸಮುದಾಯದವರು ಖಬರಸ್ತಾನ್ ಜಾಗ ಇರುವುದಾಗಿ ಹೇಳಿದ್ದರು. ನ್ಯಾಯಾಲಯ ಆದೇಶದವರೆಗೆ ಸ್ವಚ್ಛತೆ ಮಾಡದಂತೆ ಮನವಿ ಮಾಡಿದ್ದರು. ನಂತರ, ಮಹಾನಗರ ಪಾಲಿಕೆ ಮತ್ತು ಮಂಡಲೇಶ್ವರ ಸ್ವಾಮಿ ಕಮಿಟಿಯಿಂದ ಕೆಳದಿ ಅರಸರ ಸಮಾಧಿ ಸ್ಥಳವನ್ನು ಪ್ರಾಚ್ಯ ವಸ್ತು ಇಲಾಖೆಗೆ ಖಾತೆ ಮಾಡಿಕೊಟ್ಟು ಸಂರಕ್ಷಿಸಬೇಕು ಎಂದು ಆಗ್ರಹಿಸಲಾಗಿತ್ತು.

Keladi samadhi mandli
ಶಿವಮೊಗ್ಗದ ನ್ಯೂಮಂಡ್ಲಿಯಲ್ಲಿರುವ ಕೆಳದಿ ವಂಶಸ್ಥರ ಸಮಾಧಿ.

ಸಂಶೋಧಕರೇನು ಹೇಳಿದ್ದಾರೆ?
ಪುರಾತತ್ವ ಇಲಾಖೆಯ ಸಂಶೋಧಕ ಪ್ರೊ.ಸುಂದರ್ ಸೇರಿ ಇತರರು ಇದು ಅರಸರ ಸಮಾಧಿಗೆ ಮೀಸಲಿಟ್ಟ ಜಾಗ ಮತ್ತು ಅಲ್ಲಿರುವ ಎರಡು ಸಮಾಧಿಗಳು ಕೆಳದಿ ಮನೆತನದವರದ್ದಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಮಾಧಿಯ ಮೇಲಿನ ಪ್ರಾಣಿಗಳ ಚಿತ್ರ, ಕಮಲದ ಚಿತ್ರ ಮತ್ತು ದೀಪ ಇಡುವ ಜಾಗ ಇನ್ನಿತರ ಕುರುಹುಗಳನ್ನು ಉಲ್ಲೇಖಿಸಿ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದರು.

READ | ಶಿವಮೊಗ್ಗ-ತುಮಕೂರು ನಡುವೆ ಹೊಸ ರೈಲು ಸಂಚಾರ, ಎಷ್ಟು ಬೋಗಿ, ಯಾವಾಗಿಂದ ಆರಂಭ, ಎಲ್ಲೆಲ್ಲಿ ನಿಲುಗಡೆ

ಜಾಗಕ್ಕಾಗಿ ಮಂಡಲೇಶ್ವರ ಕಮಿಟಿ ಹಾಗೂ ಮುಸ್ಲಿಂ ಮುಖಂಡರ ನಡುವೆ ವ್ಯಾಜ್ಯ ಏರ್ಪಟ್ಟಿತ್ತು. ಶಿವಮೊಗ್ಗ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಜಾಗವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿತ್ತು. ಆಗ ಸಮಾಧಗಳಿರುವ ಜಾಗ ಸ್ವಚ್ಚಗೊಳಿಸಲು ಹೋದಾಗ ವಿವಾದ ಭುಗಿಲೆದ್ದಿತ್ತು. ಹೀಗಾಗಿ, ಪೊಲೀಸ್ ಬಂದೋಬಸ್ತ್ ನಲ್ಲಿ ಫೆನ್ಸಿಂಗ್ ಹಾಕಲಾಗಿದೆ.
ಸಮಾಧಿಯ ಕೆಳ ಭಾಗದ ಕಲ್ಲಿನಲ್ಲಿ ಅರೇಬಿಕ್ ಭಾಷೆಯ ಲಿಪಿ ಇದೆ ಎಂದು ಕೆಲವರು ವಾದಿಸಿದ್ದಾರೆ.

https://www.suddikanaja.com/2021/09/07/high-court-order-to-stop-encroachment-of-mc-gann-teaching-district-hospital/

error: Content is protected !!