ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಗಾಂಜಾ ಮಾರಾಟ ಮತ್ತು ಸೇವನೆ ಮಾಡಿರುವ ಆರೋಪದ ಆಧಾರದ ಮೇಲೆ ಐದು ಜನರನ್ನು ಬಂಧಿಸಲಾಗಿದೆ.
ಗಾಂಜಾ ಮಾರಾಟ ಮಾಡುತಿದ್ದ ಎಸ್.ಎನ್.ನಗರದ ಶಾಹೀದ್, ರಾಮನಗರದ ಅಲ್ತಾಫ್ ಎಂಬುವವರನ್ನು ಬಂಧಿಸಲಾಗಿದೆ. ಇವರ ಬಳಿಯಿಂದ ₹50,000 ಮೌಲ್ಯದ 250 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದವರು ಸೇರಿ ಸೇವನೆ ಮಾಡುತಿದ್ದ ಎಸ್.ಎನ್.ನಗರದ ರಾಜಿಕ್, ನಾಗರಾಜ್, ಜಿ.ಪಿ.ರಸ್ತೆಯ ಮುಸ್ತಾಕ್ ಅಹ್ಮದ್ ಅವರನ್ನು ಬಂಧಿಸಲಾಗಿದೆ.
ಸಾಗರ ಉಪ ವಿಭಾಗದ ಎಎಸ್‍ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪಿಎಸ್.ಗಳಾದ ತುಕಾರಾಮ್ ಡಿ.ಸಾಗರಕರ್, ತುರುಮಲೇಶ್, ಸಿಬ್ಬಂದಿಯಾದ ಸಂತೋಷ್ ನಾಯ್ಕ, ಎಚ್.ಎಸ್.ಮಲ್ಲೇಶ್, ಹಜರತ್ ಅಲಿ, ಶ್ರೀಧರ್, ಗುರುಬಸವರಾಜ್, ಮೋಹನ್ ತಂಡ ಕಾರ್ಯಾಚರಣೆ ನಡೆಸಿದೆ.