ಕಾರ್ತಿಕ ದೀಪೋತ್ಸವದಲ್ಲಿ ಗಮನ ಸೆಳೆದ ಚೆಂಡೆ ವಾದ್ಯ

 

 

ಸುದ್ದಿ ಕಣಜ.ಕಾಂ | TALUK | KARTIKA DEEPOTSAVA
ಸಾಗರ: ಶ್ರೀನಗರದ ಭೂತಪ್ಪನ ಕಟ್ಟೆಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ಗಮನ ಸೆಳೆಯಿತು.
ದೀಪಾವಳಿ ಸಂಭ್ರಮ ಕಳೆದು ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು, ಭಕ್ತರು ದೀಪ ಬೆಳಗುವುದರ ಮೂಲಕ ಇದನ್ನು ಆಚರಿಸುತ್ತಿದ್ದಾರೆ.
ಸಾಗರದ 8ನೇ ವಾರ್ಡ್ ಶ್ರೀನಗರದ ಭೂತಪ್ಪನ ಕಟ್ಟೆಯಲ್ಲಿ ಶನಿವಾರ ಸಂಜೆ ಸಂಭ್ರಮದ ಕಾರ್ತಿಕ ದೀಪೋತ್ಸವ ನಡೆಯಿತು. ಭಕ್ತಾದಿಗಳು ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.

ಗಮನ ಸೆಳೆದ ಕೇರಳದ ಚೆಂಡೆ ವಾದ್ಯ

ಸಾಗರದ ಶ್ರೀಸಾಯಿ ಚೆಂಡೆ ಬಳಗಕ್ಕೆ ವಿಶೇಷವಾದ ಆಹ್ವಾನವನ್ನು ಶ್ರೀನಗರ ಯುವಜನ ಸಂಘ ನೀಡಿತು. ಇದರಂತೆ ಅವರು ಶನಿವಾರ ಕಾರ್ತಿಕೋತ್ಸವ ಸಂದರ್ಭದಲ್ಲಿ ಕೇರಳದ ಚೆಂಡೆ ತಾಳಬದ್ಧವಾಗಿ ಬಾರಿಸಿದರು. ಎಲ್ಲರ ಚಿತ್ತ ಚೆಂಡೆಯತ್ತ ಇತ್ತು.
ಅನಿಲ್, ಚಂದನ್, ಕಾವ್ಯ, ಸವಿತಾ, ಆಶಾ, ರೂಪ, ರಮ್ಯಾ, ಅಕ್ಷಯ, ಶ್ರೀರಾಗ್, ಧನ್ಯ, ಮಂಜುನಾಥ್ ಚೆಂಡೆ ವಾದ್ಯ ನಡೆಸಿಕೊಟ್ಟರು. ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಸಮಿತಿ ಶ್ರೀನಗರ ಇವರು ಶ್ರೀ ಸಾಯಿ ಚೆಂಡೆ ಬಳಗಕ್ಕೆ ಸನ್ಮಾನಿಸಿದರು. ದಯಾನಂದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

https://www.suddikanaja.com/2021/11/27/garuda-gamana-vrushabha-vahana-kannada-movie-released-in-karnataka-director-raj-b-shetty-cam-for-promotion-and-express-his-deeds-about-cinema-at-shivamogga/

error: Content is protected !!