ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ಜನವರಿ 3ರಿಂದ ಶಿವಮೊಗ್ಗ ಟೌನ್-ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಮರು ಸಂಚರಿಸಲಿದೆ.
ಶಿವಮೊಗ್ಗ ಟೌನ್ ನಿಂದ ಚಿಕ್ಕಮಗಳೂರಿಗೆ ಸಂಚರಿಸುತಿದ್ದ ರೈಲನ್ನು ಬೀರೂರುವರೆಗೆ ಮಾತ್ರ ಸಂಚರಿಸುವಂತೆ ಸೂಚಿಸುವ ಮೂಲಕ ರೈಲನ್ನು ಭಾಗಶಃ ರದ್ದುಪಡಿಸಲಾಗಿತ್ತು. ಆದರೆ, ಈಗ ಮತ್ತೆ ರೈಲು ಸಂಚರಿಸಲಿದೆ.
ಜನವರಿ 4ರಿಂದ ಯಶವಂತಪುರ- ಚಿಕ್ಕಮಗಳೂರು- ಯಶವಂತಪುರ (ರೈಲು ಸಂಖ್ಯೆ 07370/ 07369) ಮರು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.