ವಿಧಾನ ಪರಿಷತ್ ಚುನಾವಣೆ, 5 ತಾಲೂಕುಗಳಲ್ಲಿ 100% ವೋಟಿಂಗ್, ಇನ್ನುಳಿದೆಡೆ ಎಷ್ಟು ಮತದಾನವಾಗಿದೆ

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಭಾರಿ ವಾದ, ವಿವಾದ, ಆರೋಪ, ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದ್ದ ವಿಧಾನ ಪರಿಷತ್ತಿನ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.

ಒಟ್ಟು 4,164 ಮತದಾರರುಗಳಲ್ಲಿ 4,158 ಜನ ಮತದಾನ ಮಾಡಿದ್ದಾರೆ. ಶೇ.99.8 ಮಹಿಳೆಯರು ಹಾಗೂ ಶೇ.99.90 ಪುರುಷರು ಸೇರಿ ಒಟ್ಟು 99.86ರಷ್ಟು ಮತದಾನವಾಗಿದೆ.

ತಾಲೂಕುವಾರು ಮತದಾನ ಪ್ರಮಾಣ
ಸೊರಬದಲ್ಲಿ 317, ಶಿಕಾರಿಪುರ 500, ಹೊನ್ನಾಳಿ 342, ನ್ಯಾಮತಿ 190, ಚನ್ನಗಿರಿ 758, ಭದ್ರಾವತಿ 477, ಶಿವಮೊಗ್ಗ 501, ಸಾಗರ 416, ಹೊಸನಗರ 308, ತೀರ್ಥಹಳ್ಳಿ 349 ಮತಗಳು ಚಲಾವಣೆಯಾಗಿವೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾವಣೆಯಾದ ಮತ ಶೇಕಡಾವಾರು ಮಾಹಿತಿ
ತಾಲೂಕು ಮತದಾನ 
ಸೊರಬ 99.69
ಶಿಕಾರಿಪುರ 100
ಹೊನ್ನಾಳಿ 99.71
ನ್ಯಾಮತಿ 100
ಚನ್ನಗಿರಿ 99.87
ಭದ್ರಾವತಿ 99.79
ಶಿವಮೊಗ್ಗ 100
ಸಾಗರ 100
ಹೊಸನಗರ 100
ತೀರ್ಥಹಳ್ಳಿ 99.43
ಒಟ್ಟು 99.86

error: Content is protected !!