ನಾಳೆ ಶಿವಮೊಗ್ಗದ ಬಟ್ಟೆ ಅಂಗಡಿಗಳು ಬಂದ್, ಕಾರಣವೇನು?

 

 

ಸುದ್ದಿ ಕಣಜ.ಕಾಂ | CITY | PROTEST AGAINST GST
ಶಿವಮೊಗ್ಗ: ಜವಳಿ ವರ್ತಕರ ಸಂಘದ ಸದಸ್ಯತ್ವ ಪಡೆದಿರುವ ನಗರದ ಇನ್ನೂರು ಜವಳಿ ಅಂಗಡಿಗಳು ಡಿಸೆಂಬರ್ 15ರಂದು ಬಂದ್ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಪ್ರಭಾಕರ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಜವಳಿ ಉತ್ಪನ್ನಗಳ ಮೇಲೆ ಶೇ.12 ಜಿ.ಎಸ್.ಟಿ ವಿಧಿಸಲು ಮುಂದಾಗಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ.

ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು. ಪ್ರತಿಭಟನೆ ಮೆರವಣಿಗೆಯು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹೊರಡಲಿದೆ. ಅಲ್ಲಿಂದ ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಿದೆ. ಜಿಲ್ಲಾಧಿಕಾರಿಗಳಿಗೆ ಸಂಘದಿಂದ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿ.ಎಸ್.ಟಿ ಶೇ.12ಕ್ಕೆ ಏರಿಕೆಯ ವಿರುದ್ಧ ಜವಳಿ ವರ್ತಕರ ಆಕ್ರೋಶ
ಅಗತ್ಯ ವಸ್ತು ಬಟ್ಟೆಗಳ ಮೇಲೆ ಶೇ.5ರಿಂದ 12ಕ್ಕೆ ಜಿ.ಎಸ್.ಟಿ. ಏರಿಕೆ ಮಾಡಲಾಗುತ್ತಿದೆ. ಆದ್ದರಿಂದ 16ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ವೆಂಕಟೇಶಮೂರ್ತಿ ತಿಳಿಸಿದರು.

READ | ನಾಳೆ ಅರ್ಧ ಶಿವಮೊಗ್ಗದಲ್ಲಿ ಕರೆಂಟ್ ಇರಲ್ಲ

2022ರ ಜನವರಿ 1 ರಿಂದ ಕೇಂದ್ರ ಸರ್ಕಾರವು ಬಟ್ಟೆಗಳ ಮೇಲೆ ಈಗಿರುವ ಶೇ.5 ಜಿ.ಎಸ್.ಟಿ.ಯನ್ನು ಶೇ. 12 ಕ್ಕೆ ಹೆಚ್ಚಳ ಮಾಡುತ್ತಿದೆ. ಇದರಿಂದ ವರ್ತಕರಿಗೆ ಮಾತ್ರವಲ್ಲದೇ ಸಾರ್ವಜನಿಕರು ಹೊರೆ ಆಗಲಿದೆ. ಆದ್ದರಿಂದ ಈ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಜವಳಿ ವರ್ತಕರು ಈಗಾಗಲೇ ಕೋವಿಡ್ ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಆದಾಯವಿಲ್ಲದೇ ಸಮಸ್ಯೆಯಾಗುತ್ತಿದೆ. ಇದರ ಮಧ್ಯೆ ಜಿ.ಎಸ್.ಟಿ. ಏರಿಕೆಯ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಅನಿಲ್ ಕುಮಾರ್ ಶೆಟ್ಟಿ, ಭಾಸ್ಕರ್, ಪ್ರಮೋದ್, ಹರೀಶ್ ಉಪಸ್ಥಿತರಿದ್ದರು.

https://www.suddikanaja.com/2021/01/30/karnataka-taxpayers-association-protest/

error: Content is protected !!