ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕುವೆಂಪುನಗರದ ಡಿವಿಎಸ್ ಬಡಾವಣೆ ಹತ್ತಿರ ಬೈಕ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಗುರುವಾರ ಬಂಧಿಸಲಾಗಿದೆ.
ತಾಲೂಕಿನ ಬೀರನಕೆರೆ ತಾಂಡಾ ನಿವಾಸಿಗಳಾದ ಕೌಶಿಕ್ (21), ಯುವರಾಜ್ (23), ವಿನೋದ್ (24) ಬಂಧಿತರು. ಆರೋಪಿಗಳಿಂದ ಒಟ್ಟು 435 ಗ್ರಾಂ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.