ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮೆಗ್ಗಾನ್ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಎಂಜಿಎಫ್ 4ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 17ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ, ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
ನಗರದ ಜೈಲ್ ಸರ್ಕಲ್ ಮತ್ತು ಹೊಸಮನೆ ಗೊಮ್ಮಟೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.