ಶಿವಮೊಗ್ಗದಲ್ಲಿ ನಾಕಾಬಂದಿ, ತಮಿಳುನಾಡಿಂದ ಬಂದ 25 ಬಸ್, ಎಲ್ಲ ಪ್ರಯಾಣಿಕರಿಗೂ ಸ್ಕ್ರೀನಿಂಗ್, ಹೋಂ‌ ಕ್ವಾರಂಟೈನ್

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ; ರಾಜ್ಯ ಸರ್ಕಾರ ಖಡಕ್ ನಿಯಮಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಅಧಿಕ ಸೋಂಕಿರುವ ಪ್ರದೇಶಗಳಿಂದ ಬರುವ ಜನರಿಗೆ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜೊತೆಗೆ, ಕಡ್ಡಾಯ ಸ್ವಯಂ ಕ್ವಾರಂಟೈನ್ ಮಾಡಲಾಗುತ್ತಿದೆ.

READ | ಶಿವಮೊಗ್ಗ ಮತ್ತೆ ವೀಕೆಂಡ್ ಲಾಕ್, ಕೋವಿಡ್ ಟಫ್ ರೂಲ್ಸ್, ಏನಿರುತ್ತೆ, ಏನಿರಲ್ಲ?

ತಮಿಳುನಾಡಿನಿಂದ ಶಿವಮೊಗ್ಗಕ್ಕೆ 25 ಸಾರಿಗೆ ಸಂಸ್ಥೆ ಬಸ್ ಗಳು ಬುಧವಾರ ಬೆಳಗ್ಗೆ 6.15 ಗಂಟೆಗೆ ಶಿವಮೊಗ್ಗಕ್ಕೆ ಬಂದಿವೆ. ಪ್ರತಿಯೊಂದು ಬಸ್ ಅನ್ನು ತಡೆದು ಪ್ರಯಾಣಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗಿದೆ. ಪ್ರಯಾಣಿಕರನ್ನು ಏಳು ದಿನಗಳ ಕ್ವಾರಂಟೈನ್ ನಲ್ಲಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕ್ವಾರಂಟೈನ್ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಜನರೊಂದಿಗೆ ಸಂಪರ್ಕ ಹೊಂದಬಾರದು. ಮನೆಯಲ್ಲಿಯೃ ಇರಬೇಕು. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಏಕಾಏಕಿ ಟಫ್ ರೂಲ್ಸ್ ಜನ ತಬ್ಬಿಬ್ಬು
ಸೋಂಕು ಅಧಿಕವಿರುವ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಶಿವಮೊಗ್ಗ ಸೇರಿದಂತೆ ನಾನಾ ಕಡೆ ಜನರು ಬಸ್ ಪ್ರಯಾಣ ಬೆಳೆಸಿದ್ದು, ಏಕಾಏಕಿ ಶಿವಮೊಗ್ಗದಲ್ಲಿ ತಪಾಸಣೆಗೆ ಒಳಪಡಿಸಿದ್ದರಿಂದ ಜನ ಗಾಬರಿಯಾಗಿದ್ದರು.

ಆಗುಂಬೆಯಲ್ಲಿ ಪ್ರಾಣಿಗಳಿಗೆ ಆಹಾರ ತಿನ್ನಿಸಿದರೆ ಬೀಳುತ್ತೆ ಫೈನ್, ದಂಡದ ಪಟ್ಟಿಗಾಗಿ ಕ್ಲಿಕ್ ಮಾಡಿ