ರೈಲ್ವೆ ಇಲಾಖೆಯಿಂದ ಮಹತ್ವದ ಸೂಚನೆ, ಈ ತಪ್ಪು ಮಾಡಿದರೆ 500 ರೂ. ದಂಡ ಗ್ಯಾರಂಟಿ

ಸುದ್ದಿ ಕಣಜ.ಕಾಂ | KARNATAKA | TOURISM
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ಹಿನ್ನೆಲೆ ಅರಸಾಳು ರೈಲ್ವೆ ನಿಲ್ದಾಣ (arasalu railway station)ದಲ್ಲಿರುವ ಮಾಲ್ನುಡಿ ಮ್ಯೂಸಿಯಂ(malgudi museum) ಸಹ ಬಂದ್ ಇರಲಿದೆ ಎಂದು ನೈಋತ್ಯ ರೈಲ್ವೆ  (South Western Railway) ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 8, 9 ಹಾಗೂ 15, 16ರಂದು ಮ್ಯೂಸಿಯಂ ಸಹ ಬಂದ್ ಇರಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಂಗಳವಾರವೂ ತೆರೆದಿರಲಿದೆ.

ಮಾರ್ಗಸೂಚಿ ಮೀರಿದರೆ 500 ರೂ. ದಂಡ

ಮ್ಯೂಸಿಯಂ ವ್ಯಾಪ್ತಿಯಲ್ಲಿ ಮಾಸ್ಕ್ (mask) ಧಾರಣೆ ಹಾಗೂ ಕೋವಿಡ್ ಮಾರ್ಗಸೂಚಿ (covid 19 guidelines)ಗಳನ್ನು ಪಾಲನೆ ಮಾಡದಿದ್ದರೆ, ಅಂತವರಿಗೆ 500 ರೂಪಾಯಿ ದಂಡ (penalty) ವಿಧಿಸಲಾಗುವುದು ಎಂದು ನೈಋತ್ಯ ರೈಲ್ವೆ ಡಿ.ಆರ್.ಎಂ ರಾಹುಲ್ ಅಗರ್ವಾಲ್ (Rahul Agarwal) ತಿಳಿಸಿದ್ದಾರೆ.