ಸಮುದಾಯ ಆರೋಗ್ಯ ಅಧಿಕಾರಿ‌ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ‌ ಸಲ್ಲಿಸಿ

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಸಮುದಾಯ ಆರೋಗ್ಯ ಅಧಿಕಾರಿ (CHO) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 23 ಕೊನೆಯ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಚಿಕ್ಕಬಳ್ಳಾಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಗುತ್ತಿಗೆ ಆಧಾರದ ಮೇಲೆ‌ 45 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಅರ್ಹರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

READ | ಪಡಿತರ ಕೇಂದ್ರದಲ್ಲಿ ಇನ್ಮುಂದೆ ಕುಚಲಕ್ಕಿ ವಿತರಣೆ

ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ
CHO ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಬಿಎಸ್.ಸಿ ನರ್ಸಿಂಗ್ (BSc Nursing)/ ಪೋಸ್ಟ್‌ ಬಿಎಸ್.ಸಿ ನರ್ಸಿಂಗ್ (post BSc nursing) ಜತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ.ಎನ್‌.ಸಿ ಅಥವಾ ಐಎನ್‌.ಸಿ(INC) ದಿಂದ ನೋಂದಣಿ ಹೊಂದಿರಬೇಕು. ಕನ್ನಡ (Kannada) ಹಾಗೂ ಇಂಗ್ಲಿಷ್ (English) ಭಾಷೆಯಲ್ಲಿ ನಿಪುಣಾಗಿರಬೇಕು. ಈ ಎಲ್ಲ ಶೈಕ್ಷಣಿಕ ಅರ್ಹತೆ ಜೊತೆಗೆ‌ ಕರ್ನಾಟಕದಲ್ಲಿ 10 ವರ್ಷ ವಾಸದ ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸೂಚನೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷವಿದ್ದು, ಗರಿಷ್ಠ ವಯೋಮಿತಿಯು ಸಾಮಾನ್ಯ ಅಭ್ಯರ್ಥಿಗೆ 35, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.

READ | ‘ಓಂ ಶಕ್ತಿ’ ಪ್ರವಾಸಿಗರಿಂದ ಶಿವಮೊಗ್ಗದಲ್ಲಿ ಕೋವಿಡ್ ಹೈ ರಿಸ್ಕ್, ಇದುವರೆಗೆ ಎಷ್ಟು ಜನರಿಗೆ ಸೋಂಕು ತಗುಲಿದೆ?

ಜನವರಿ 6 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಜ.26ರಂದು ಲಿಖಿತ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ದಾಖಲೆ ಪರಿಶೀಲನೆ ಫೆಬ್ರವರಿ 1ರಂದು ನಡೆಯಲಿದೆ. ಮಾಹಿತಿಗಾಗಿ ಅಭ್ಯರ್ಥಿಗಳು ನೋಟಿಫಿಕೇಷನ್ ಪ್ರತಿಯನ್ನು ನೋಡಬಹುದು. ವೆಬ್ ಸೈಟ್ ಗೆ‌ ನೀಡಬಹುದು.

NOTIFICATION

ಪಿಯುಸಿ, ಡಿಗ್ರಿ, ಪಿಜಿ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶ, 3261 ಹುದ್ದೆಗಳ ಭರ್ತಿಗೆ ಅಧಿಸೂಚನೆ