BREAKING NEWS | ಶಿವಮೊಗ್ಗದಲ್ಲಿ ಮುನ್ನೂರರ ಗಡಿ ದಾಟಿದ ಕೊರೊನಾ ಸೋಂಕು

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ನಿರಂತರ ಏರಿಕೆಯಾಗುತ್ತಲೇ ಇದೆ. ಗುರುವಾರ ಹೊಸದಾಗಿ 319 ಪ್ರಕರಣಗಳು ಪತ್ತೆಯಾಗಿದ್ದು, 87 ಜನರು ಗುಣಮುಖರಾಗಿದ್ದಾರೆ.

ಶಿವಮೊಗ್ಗ ತಾಲೂಕಿನಲ್ಲಿ 171 ಪ್ರಕರಣಗಳು ಪತ್ತೆಯಾಗಿವೆ. ಭದ್ರಾವತಿಯಲ್ಲಿ 59, ತೀರ್ಥಹಳ್ಳಿಯಲ್ಲಿ 19, ಶಿಕಾರಿಪುರದಲ್ಲಿ 13, ಸಾಗರದಲ್ಲಿ 37, ಹೊಸನಗರದಲ್ಲಿ 8, ಸೊರಬದಲ್ಲಿ 8 ಹಾಗೂ ಬಾಹ್ಯ ಜಿಲ್ಲೆಯ 4 ಪ್ರಕರಣಗಳು ದೃಢಪಟ್ಟಿವೆ.

ಇಂದು 2,711 ಮಾದರಿಗಳನ್ನು ಸಂಗ್ರಹಿಸಿದ್ದು, 2,558 ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 144, ಡಿಸಿಎಚ್.ಸಿಯಲ್ಲಿ 57, ಖಾಸಗಿ ಆಸ್ಪತ್ರೆಯಲ್ಲಿ 74, ಮನೆ ಆರೈಕೆಯಲ್ಲಿ 639, ಟ್ರಿಯೇಜ್ ನಲ್ಲಿ 35 ಸೇರಿ ಸಕ್ರಿಯ ಪ್ರಕರಣಗಳ ಸಂಖ್ಯೆ 979 ಏರಿಕೆಯಾಗಿದೆ.