ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಮಾಜಿಕ ಜಾಲತಾಣ(Social Media)ದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬನ ಮೇಲೆ ಗೂಳಿಯೊಂದು ಏಕಾಏಕಿ ದಾಳಿ ನಡೆಸಿದೆ.
ಸಿಸಿ ಟಿವಿ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಘಟನೆ ಡಿಸೆಂಬರ್ 3ರಂದು ನಡೆದಿದೆ.
Readv| ಸಕ್ರೆಬೈಲಿನ 4 ಆನೆ ಸೇರಿ ರಾಜ್ಯದ ಆನೆಗಳು ಮಧ್ಯ ಪ್ರದೇಶಕ್ಕೆ ಶಿಫ್ಟ್, ಯಾವ್ಯಾವ ಆನೆಗಳ ವರ್ಗಾವಣೆ?
ಸಿಸಿಟಿವಿ ಫುಟೇಜ್’ನಲ್ಲೇನಿದೆ?
ಫುಟ್ಪಾತ್ ನಲ್ಲಿ ಕೊಡೆಯೊಂದಿಗೆ ವ್ಯಕ್ತಿಯೊಬ್ಬ ನಿಂತುಕೊಂಡಿರುತ್ತಾನೆ. ಅದೇ ಮಾರ್ಗವಾಗಿ ಗೂಳಿಯೊಂದು ಬಂದಿದೆ. ಆಗ ಅವನು ಅದರೆಡೆಗ ತಿರುಗಿಕೊಂಡಿದ್ದಾನೆ. ತಕ್ಷಣ ರಾಂಗ್ ಆದ ಗೂಳಿ ವ್ಯಕ್ತಿಯನ್ನು ಎದುರುಗಡೆಯಿಂದ ಕೋಡಿನ ಸಹಾಯದಿಂದ ಎತ್ತೆಸಿದಿದೆ.
ಸಹಾಯಕ್ಕೆ ದೌಡಾಯಿಸಿದ ಜನ
ಗೂಳಿ ಆಕ್ರಮಣಕಾರಿಯಾಗಿ ವ್ಯಕ್ತಿಯ ಮೇಲೆ ಎರಗಿದ್ದೇ ಆತ ಸಹ ಗಾಬರಿಯಾಗಿದ್ದಾನೆ. ತಕ್ಷಣ ಅಲ್ಲಿಯೇ ಇದ್ದ ಅಂಗಡಿ ಮಾಲೀಕರು, ಸಾರ್ವಜನಿಕರು ಸಹಾಯಕ್ಕೆ ದೌಡಾಯಿದ್ದಾರೆ. ವಿಡಿಯೋ ಸತ್ಯಾಸತ್ಯಯ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಿಲ್ಲ.