ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಕ್ರೆಬೈಲು ಆನೆಬಿಡಾರ(Sakrebailu elephant camp)ದ ನಾಲ್ಕು ಆನೆಗಳು ಸೇರಿ ರಾಜ್ಯದ ವಿವಿಧ ಆನೆಬಿಡಾರಗಳಿಂದ ಒಟ್ಟು 14 ಆನೆಗಳನ್ನು ಮಧ್ಯಪ್ರದೇಶ(Madhya pradesh-MP)ಕ್ಕೆ ಕಳುಹಿಸುವುದಕ್ಕೆ ಆದೇಶಿಸಲಾಗಿದೆ. ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಆಯಾ ಕ್ಯಾಂಪ್ ಗಳಲ್ಲಿ ಮಾಡಿಕೊಳ್ಳಲಾಗುತ್ತಿದೆ.
READ | ಡಾ.ಧನಂಜಯ ಸರ್ಜಿ ಬಿಜೆಪಿಗೆ ಗ್ರ್ಯಾಂಡ್ ಎಂಟ್ರಿ, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸರ್ಜಿ ಹೇಳಿದ್ದೇನು?
12 ಗಂಡು ಮತ್ತು 2 ಹೆಣ್ಣು ಆನೆಗಳನ್ನು ಕಳುಹಿಸುವುದಕ್ಕೆ ಆದೇಶಿಸಿದ್ದು, ಈಗಾಗಲೇ ಮಧ್ಯಪ್ರದೇಶದ ತಂಡವು ರಾಜ್ಯದ ಆನೆಬಿಡಾರಗಳಿಗೆ ಭೇಟಿ ನೀಡಿದ್ದು ಆನೆಗಳನ್ನು ವೀಕ್ಷಿಸಿದೆ. ಆನೆಗಳ ವರ್ಗಾವಣೆ ಸಂಬಂಧಪಟ್ಟಂತೆ ವರದಿಯನ್ನು ನೀಡಲಾಗಿದೆ.
ಯಾವ್ಯಾವ ಆನೆಗಳನ್ನು ವರ್ಗಾವಣೆ?
- ಸಕ್ರೆಬೈಲು ಆನೆಬಿಡಾರದಿಂದ ರವಿ(25), ಶಿವಾ(6), ಮಣಿಕಂಠ(35), ಬೆಂಗಳೂರು ಗಣೇಶ(36).
- ರಾಮಪುರ, ಬಂಡಿಪುರ ಟೈಗರ್ ರಸರ್ವ್‍ದಿಂದ ಗಣೇಶ(17), ಕೃಷ್ಣ(21), ಗಜ(7), ಮರ್ಸಿಹಾ(7), ಪೂಜಾ(9)
- ಮಡಿಕೇರಿಯಲ್ಲಿರುವ ದುಬಾರೆ ಬಿಡಾರದಿಂದ ಜನರಲ್ ತಿಮ್ಮಯ್ಯ(8), ಜನರಲ್ ಕರಿಯಪ್ಪ(8), ವಲ್ಲಿ(40), ಲವ(21), ಮಾರುತಿ(20)
ಮಧ್ಯಪ್ರದೇಶಕ್ಕೆ ಕಳುಹಿಸಲು ಕಾರಣ?
ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಅಧಿಕವಿದ್ದು, ಅಲ್ಲಿ ಕಾರ್ಯಾಚರಣೆ ನಡೆಸುವುದಕ್ಕಾಗಿ ಆನೆಗಳ ಅವಶ್ಯಕತೆ ಇದೆ. ಹೀಗಾಗಿ, ರಾಜ್ಯದ ಆನೆಗಳನ್ನು ಕಳುಹಿಸುವಂತೆ ಕೋರಲಾಗಿದೆ. ಅದರನ್ವಯ ಗಜಪಡೆ ಕಳುಹಿಸುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
https://suddikanaja.com/2022/12/04/banned-association-namte-wrote-on-walls-at-shiralakoppa/