
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಹಾರೋಗೊಳಿಗೆ ಗ್ರಾಮದಲ್ಲಿ ಮನೆ ಪಕ್ಕ ನಿಲ್ಲಿಸಿದ್ದ ಬೈಕಿಗೆ ಬೆಂಕಿ ತಗುಲಿ ಅದು ಮನೆಗೂ ಆವರಿಸಿ ಭಾರಿ ಹಾನಿ ಸಂಭವಿಸಿದೆ.
ವಾಸಂತಿ ರಾಮಪ್ಪ ಎಂಬುವವರ ಮನೆಗೆ ಬೆಂಕಿ ತಗುಲಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೈಕಿಗೆ ತಗುಲಿದ ಬೆಂಕಿ ಮನೆಗೆ ಹಬ್ಬಿದ್ದೇ ಗ್ರಾಮಸ್ಥರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ತಾಳಗುಪ್ಪ- ಬೆಂಗಳೂರು ರೈಲು ತುಮಕೂರಲ್ಲೇ ಸ್ಟಾಪ್, ಹಲವು ರೈಲು ಸಂಚಾರದಲ್ಲಿ ತೊಡಕು, ಕಾರಣವೇನು?
ನದಿಯಲ್ಲಿ ಮುಳುಗಿ ಯುವಕ ಸಾವು
ತುಂಗಾನದಿಯಲ್ಲಿ ಈಜುವುದಕ್ಕೆಂದು ಹೋಗಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತನನ್ನು ತಾಲೂಕಿನ ಹೊರಬೈಲು ಗ್ರಾಮದ ಮಾಧವ ಆಚಾರ್ (26) ಎಂದು ಗುರುತಿಸಲಾಗಿದೆ.
ನಾಲ್ವರು ಯುವಕರು ತುಂಗಾನದಿಗೆ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿದ್ದ ಮಾಧವ ಮೇಲೆಳಲಿಲ್ಲ. ತಕ್ಷಣ ಹುಡುಕಾಟ ಮಾಡಲಾಗಿದೆ. ಮುಳುಗು ತಜ್ಞರ ಸಹಕಾರದಲ್ಲಿ ಕಾರ್ಯಾಚರಣೆಯೂ ಕೈಗೊಳ್ಳಲಾಗಿದೆ. ಶವ ಪತ್ತೆಯಾಗಿದೆ.
Monsoon 2023 | ಈ ವರ್ಷ ನೈರುತ್ಯ ಮುಂಗಾರು ವಿಳಂಬ, ಇನ್ನೂ ಸ್ವಲ್ಪ ದಿನ ಸಹಿಸಿಕೊಳ್ಳಬೇಕಿದೆ ಬಿಸಿಲು, ಕಾರಣವೇನು?