
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅಪ್ ಡೇಟ್ ನೆಪದಲ್ಲಿ ಕರೆ ಮಾಡಿ ವೃದ್ಧರೊಬ್ಬರಿಗೆ ಮೋಸ ಮಾಡಿದ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಮಲೆನಾಡಿಗೆ ಎಚ್ಚರಿಕೆ, ಶಿವಮೊಗ್ಗದಲ್ಲಿ 29 ಬೋರ್’ವೆಲ್ ಫೇಲ್!
ಸೊರಬ ತಾಲೂಕಿನ 71 ವರ್ಷದ ವ್ಯಕ್ತಿಯು ಮೋಸ ಹೋದವರು. ಮೇ 18ರ ಸಂಜೆ ಮೊಬೈಲ್’ಗೆ ಕರೆ ಮಾಡಿದ್ದು, ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕೆಂದು ಇಲ್ಲದಿದ್ದರೆ 24 ಗಂಟೆಯೊಳಗೆ ಖಾತೆ ಬ್ಲಾಕ್ ಆಗುತ್ತದೆ ಹಾಗೂ ಎಟಿಎಂ ಅವಧಿ ಮುಗಿಯುತ್ತದೆ ಎಂದು ಕರೆ ಮಾಡಿ ತಿಳಿಸಲಾಗಿದೆ.
ಮೋಸ ಹೋಗಿದ್ದು ಹೇಗೆ?
ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದು, ಮೆಸೇಜ್ ಬಂದಿದ್ದರಿಂದ ಅದನ್ನು ನಂಬಿದ ವ್ಯಕ್ತಿಯು ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿರುತ್ತಾರೆ. ಅವರ ಕೇಳಿದ ರೀತಿಯಲ್ಲಿ ಓಟಿಪಿ ನಂಬರ್ ಸಹ ನೀಡಿರುತ್ತಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಕೆನರಾ ಬ್ಯಾಂಕ್ ಖಾತೆಯಿಂದ 1.85 ಲಕ್ಷ ರೂ. ಹಣ ಡ್ರಾ ಆಗಿರುವ ಮೆಸೇಜ್ ಮೊಬೈಲ್ ಗೆ ಬಂದಿದೆ. ಹಣ ಕಳೆದುಕೊಂಡ ವ್ಯಕ್ತಿಯು ಅನುಮಾನಗೊಂಡು ಮನೆಯವರೊಂದಿಗೆ ಚರ್ಚಿಸಿದ್ದು, ಯಾರೋ ಅಪರಿಚಿತರು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ನಂಬಿಸಿ ಓಟಿಪಿ ನಂಬರ್ ಪಡೆದು ಮೋಸ ಮಾಡಿದ್ದಾರೆಂದು ತಿಳಿಸಿದ್ದಾರೆ. ಈ ಕುರಿತು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Water scarcity | ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಕೊರತೆ, ಎಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ?