
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕ್ಯಾತಸಂದ್ರ ಯಾರ್ಡ್(Kyatsandra Yard)ನಲ್ಲಿ ಲೆವೆಲ್ ಕ್ರಾಸಿಂಗ್ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಇಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಮೇ 23ರಂದು ರೈಲ್ವೆ ಸೇವೆಯಲ್ಲಿ ತೊಂದರೆಯಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
READ | ಶಿವಮೊಗ್ಗದಿಂದ ವಿಮಾನ ಹಾರಾಟ ಇನ್ನಷ್ಟು ವಿಳಂಬ, ಕಾರಣವೇನು? ಯಾವ ಮಾರ್ಗಗಳಲ್ಲಿ ಮೊದಲ ಹಾರಾಟ?
23ರಂದು ತುಮಕೂರುವರೆಗಷ್ಟೇ ಇಂಟರ್’ಸಿಟಿ
ರೈಲು ಸಂಖ್ಯೆ 20652 ತಾಳಗುಪ್ಪ-ಬೆಂಗಳೂರು ಇಂಟರ್’ಸಿಟಿ (Talaguppa–KSR Bengaluru Daily Express) ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಶಿವಮೊಗ್ಗ ಜಿಲ್ಲೆ ತಾಳಗುಪ್ಪದಿಂದ ಬೆಳಗ್ಗೆ 5.15 ಗಂಟೆಗೆ ಹೊರಟು ಬೆಳಗ್ಗೆ 10.22 ಗಂಟೆಗೆ ತುಮಕೂರಿಗೆ ತಲುಪಲಿದೆ. ಇದು ಒಂದು ದಿನಕ್ಕೆ ಮಾತ್ರ ಅನ್ವಯವಾಗಲಿದೆ.
ಯಾವ್ಯಾವ ರೈಲುಗಳ ಸಂಚಾರಕ್ಕೆ ತೊಡಕು?
ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಹಾಗೂ ರೈಲು ಸಂಖ್ಯೆ 16240 ರೈಲು ಸಂಚಾರವು ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 12614 ಬೆಂಗಳೂರು–ಮೈಸೂರು ಒಡೆಯರ್ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಮೇ 23ರಂದು ಸ್ಥಗಿತಗೊಳಿಸಲಾಗಿದೆ.
ಭಾಗಶಃ ರದ್ದುಪಡಿಸಲಾದ ರೈಲುಗಳು
ರೈಲು ಸಂಖ್ಯೆ 06571 ಕೆ.ಎಸ್.ಬೆಂಗಳೂರು (KSR Bengaluru)- ತುಮಕೂರು ಮೆಮೋ(Tumakuru MEMU) ವಿಶೇಷ ರೈಲು ದೊಡ್ಬೆಲೆಯಲ್ಲಿ ನಿಲುಗಡೆ.
ರೈಲು ಸಂಖ್ಯೆ 12725 ಕೆಎಸ್.ಆರ್.ಬೆಂಗಳೂರು (KSR Bengaluru)– ಧಾರವಾಡ ಸಿದ್ದಗಂಗಾ ರೈಲು (Dharwad Siddaganga Daily Express) ರೈಲು ಬೆಂಗಳೂರು ಬದಲು ತುಮಕೂರಿನಿಂದ ಸಂಚರಿಸಲಿದೆ. ಧಾರವಾಡ- ಕೆ.ಎಸ್.ಆರ್ ಬೆಂಗಳೂರು ರೈಲು (12726) ಅರಸಿಕೆರೆವರೆಗೆ ಪ್ರಯಾಣಿಸಲಿದೆ.
Water scarcity | ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಕೊರತೆ, ಎಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ?