ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ದುರ್ಗಾ ಲಾಡ್ಜ್ ಬಳಿ ಅನಾರೋಗ್ಯದಿಂದ ಸುಸ್ತಾದಂತೆ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿದಿದ್ದಾರೆ.
ಮೃತ ವ್ಯಕ್ತಿಯು 5.10 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಇದ್ದು ದುಂಡು ಮುಖ ಹೊಂದಿದ್ದು, ಕೆಂಪು ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಬಿಳಿ ಬಣ್ಣದ ಮಾಸಲು ಪ್ಯಾಂಟ್ ಹಾಗೂ ಕಂದು ಬಣ್ಣದ ಬನಿಯನ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.