JOBS IN SHIVAMOGGA ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ ಅವಕಾಶ, ಇಂದೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಂತ್ರಿಕ ಶಿಕ್ಷಣ ಹಿನ್ನೆಲೆಯ ಹೊಸ ಪದವೀಧರರಿಗೆ ಸಿವಿಲ್ ಕಾಮಗಾರಿ ನಿರ್ವಹಣೆ, ನಗರ ಯೋಜನೆ, ಹಣಕಾಸು, ಪರಿಸರ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ಪಡೆಯಲು ಅನುವಾಗುವ ಟುಲಿಪ್ ಯೋಜನೆಯಲ್ಲಿ ಇಂಟರ್ನ್‍ಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪದವೀಧರರು 5000 ರೂಪಾಯಿ ಸ್ಟೈಫಂಡ್ ನೊಂದಿಗೆ ಒಂದು ವರ್ಷ ಹಾಗೂ ಸ್ಟೈಫಂಡ್ ರಹಿತವಾಗಿ 3 ತಿಂಗಳ ಇಂಟರ್ನ್ ಶಿಪ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯು ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ಜಂಟಿ ಕಾರ್ಯಾಚರಣೆಯಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ಎಸ್. ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಅರ್ಹ ಪದವೀಧರರು ಫೆಬ್ರವರಿ 28 ರೊಳಗೆ https://internship.aicte-india.org/  ಲಿಂಕ್ ಬಳಸಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಲಿಂಕ್ ಬಳಸಬಹುದು ಅಥವಾ ಕಛೇರಿಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ.

CLICK HERE TO APPLY

https://www.suddikanaja.com/2021/12/17/mrw-vrw-jobs-in-bhadravathi-on-sslc-and-degree-passed-candidates/

error: Content is protected !!