ಅಣ್ಣನ ಕಾರನ್ನೇ ಕದ್ದ ತಮ್ಮ!

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಅಣ್ಣನ ಕಾರನ್ನೇ ತಮ್ಮ ಕದ್ದಿರುವ ಘಟನೆ ತನಿಖೆಯಿಂದ ಗೊತ್ತಾಗಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಅಕ್ಷಯ್ ಎಂಬುವವರು ಕಾರನ್ನು ಕಳೆದುಕೊಂಡ ವ್ಯಕ್ತಿ. ಆತನ ಸಹೋದರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ನಿವಾಸಿ ಅಖಿಲೇಶ್ ಕಾರು ನಕಲಿ ಕೀಲಿ ಬಳಸಿ ಕಾರನ್ನು ಕಳವು ಮಾಡಿದ್ದ ವ್ಯಕ್ತಿ.

ಕಾರು ಕಳ್ಳತನ ನಡೆದಿದ್ದು ಎಲ್ಲಿ, ಹೇಗೆ?

2021ರ ಅಕ್ಟೋಬರ್ 27ರಂದು ಅಕ್ಷಯ್ ಅವರು ಕೋಟ್ ಕೇಸ್ ವೊಂದರ ಸಂಬಂಧ ಭದ್ರಾವತಿಗೆ ಬಂದಿದ್ದರು. ಲಾಡ್ಜಿನಲ್ಲಿ ತಂಗಿದ್ದ ಅವರು ಅಂದು ಭದ್ರಾವತಿ ನ್ಯಾಯಾಲಯಕ್ಕೆ ಹೋಗಿ ವಾಪಸ್ ಬರುವ ಹೊತ್ತಿಗೆ ಕಾರು ಪಾರ್ಕ್ ಮಾಡಿರುವ ಜಾಗದಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಅಕ್ಷಯ್ ಅವರು ಭದ್ರಾವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆ
ಕಾರಿನ ಬಗ್ಗೆ ಲಾಡ್ಜ್ ನ ಸೆಕ್ಯೂರಿಟಿ ಗಾರ್ಡ್ ಗೆ ವಿಚಾರಿಸಿದರೂ ಪ್ರಯೋಜನವಾಗಿಲ್ಲ. ನಂತರ, ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಅಕ್ಷಯ್ ಅವರು ಪರಿಶೀಲಿಸಿದ್ದಾರೆ. ಆಗ ತಮ್ಮನೇ ಕಾರನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸಂಬಂಧಿಕರ ಮೂಲಕ ಕಾರನ್ನು ನೀಡುವಂತೆ ಕೋರಲಾಗಿದೆ. ಆದರೆ, ವಾಪಸ್ ನೀಡಿಲ್ಲ. ಹೀಗಾಗಿ, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

https://www.suddikanaja.com/2021/07/14/accused-arrest/

error: Content is protected !!