ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ, ಕಿಡಿಕಾರಿದ ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಇವರ ಬೇಡಿಕೆಗಳೇನು?

 

 

ಸುದ್ದಿ ಕಣಜ.ಕಾಂ |  CITY | SHRI NARAYANA GURUJI 
ಶಿವಮೊಗ್ಗ: ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವಿಡಲು ಅನುಮತಿ ನೀಡದೇ ಅವರನ್ನು ಅವಮಾನ ಮಾಡಲಾಗಿದೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ನೀಡಿರುವ ವೇದಿಕೆಯ ಪ್ರಮುಖರು, ಸ್ತಬ್ದ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ನಿರಾಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ತ್ರೀ ಸಮಾನತೆಯನ್ನು ನಾರಾಯಣ ಗುರುಗಳು ಪ್ರತಿಪಾದನೆ ಮಾಡಿದ್ದಾರೆ. ಜೊತೆಗೆ, ಜಾತಿ, ಮತ ಭೇದಗಳನ್ನು ಧಿಕ್ಕರಿಸಿ ಸಮಾಜೋದ್ದಾರಕ್ಕೆ ಶ್ರಮಿಸಿದ್ದಾರೆ. ಇಂತಹ ಮಹಾಪುರುಷರ ಸ್ತಬ್ದ ಚಿತ್ರವನ್ನು ತಿರಸ್ಕಾರ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ವೇದಿಕೆಯ ಪ್ರಮುಖ ಬೇಡಿಕೆ
ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಕ್ಕೆ ಅವಕಾಶ ನೀಡಬೇಕು. ಈ ಮಮೂಲಕ ಬ್ರಹ್ಮರ್ಷಿ ನಾರಾಯಣ ಗುರುಗಳಿಗೆ ಗೌರವ ನೀಡಬೇಕು.
ವೇದಿಕೆಯ ಪ್ರದೀಪ್, ಕೆ.ಎಲ್.ಉಮೇಶ್, ಕೆ.ಪಿ.ಲಿಂಗೇಶ್, ಬಿ.ಯೋಗೇಶ್, ವಿಜಯ್ ಕನ್ಯೆಮನೆ, ಎಸ್.ಪಿ.ವಿಜಯ್ ಕುಮಾರ್, ಸುಧಾಕರ್ ಶೆಟ್ಟಿಹಳ್ಳಿ ಉಪಸ್ಥಿತರಿದ್ದರು.

https://www.suddikanaja.com/2021/09/16/narayanaguru-vichara-vedike-started-at-sagara/

error: Content is protected !!