ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (JNNCE) ಜು.9ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ಶಿಕ್ಷಣ ತಜ್ಞರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
READ | ಗಾಜನೂರು ಡ್ಯಾಂ ಗೇಟ್ ಓಪನ್, ಎಷ್ಟು ನೀರು ಹೊರಬಿಡಲಾಗಿದೆ? ತುಂಬಿ ಹರಿಯುತ್ತಿರುವ ತುಂಗಾ ಹೊಳೆ
ಕಾಲೇಜಿಗೆ ತೆರಳಲು ಬಸ್ ಲಭ್ಯ
ಸಿಇಟಿ/ ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿದ್ದು, ಜೊತೆಯಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತಾಗಿ ತಜ್ಞರು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಬಹುದಾಗಿದೆ. ವಿಶೇಷ ಸಂವಾದಕ್ಕೆ ಆಗಮಿಸಲು ಪೋಷಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗ ಬೆಳಗ್ಗೆ 10.30ಕ್ಕೆ ಮಹಾವೀರ ಸರ್ಕಲ್ ನಿಂದ ಕಾಲೇಜಿಗೆ ವಿಶೇಷ ಬಸ್ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9632471667 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.