BREAKING NEWS | ಶಿವಮೊಗ್ಗದಲ್ಲಿ ಇಂದು ದಾಖಲೆಯ ಕೊರೊನಾ ಸೋಂಕು, ಮೂರನೇ ಬಲಿ

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ಜಿಲ್ಲೆಯಲ್ಲಿ ವೇಗವಾಗಿ ವ್ಯಾಪಿಸುತ್ತಿದ್ದು, ಗುರುವಾರವೊಂದೇ ದಿನ 635 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮತ್ತೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸಾವಿನ ಸರಣಿ ಮುಂದುವರಿದಿದೆ.
2 ಸಾವಿರ ದಾಟಿದ ಸಕ್ರಿಯ ಪ್ರಕರಣ
ಸಕ್ರಿಯ ಪ್ರಕರಣಗಳ ಸಂಖ್ಯೆಯು 2,028ಕ್ಕೆ ಏರಿಕೆಯಾಗಿದೆ. ಮನೆ ಆರೈಕೆಯಲ್ಲೇ 1,933 ಜನರಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 39, ಡಿಸಿಎಚ್.ಸಿಯಲ್ಲಿ 18, ಖಾಸಗಿ ಆಸ್ಪತ್ರೆಯಲ್ಲಿ 24, ಟ್ರಿಯೇಜ್ ನಲ್ಲಿ 14 ಜನರಿದ್ದಾರೆ. ರೋಗದ ಲಕ್ಷಣ ಹೊಂದಿರುವ 2,727 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. 2,598 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.

ತಾಲೂಕುವಾರು ಪಾಸಿಟಿವ್ ವರದಿ
ತಾಲೂಕು ಪಾಸಿಟಿವ್
ಶಿವಮೊಗ್ಗ 260
ಭದ್ರಾವತಿ 125
ತೀರ್ಥಹಳ್ಳಿ 42
ಶಿಕಾರಿಪುರ 24
ಸಾಗರ 111
ಹೊಸನಗರ 28
ಸೊರಬ 29
ಹೊರ ಜಿಲ್ಲೆ 16
ಶಿಕ್ಷಣ ಸಂಸ್ಥೆಗಳಲ್ಲಿ ಪಾಸಿಟಿವ್  185

https://www.suddikanaja.com/2021/11/11/vaccination-against-deadly-virus-pneumococcal-in-shivamogga/

error: Content is protected !!