ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಅಡಿಕೆ ಚೇಣಿ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದಕ್ಕೆ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.
ತಾಲೂಕಿನ ಸಂತೇಹಕ್ಲು ಗ್ರಾಮದ ಪುರಲುಕೊಪ್ಪದ ಮಂಜುನಾಥ್ (46) ಎಂಬುವವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ಕಂಡ ಪತ್ನಿ ಉಷಾ (40) ಆತಂಕಗೊಂಡು ನೇಣು ಹಾಕಿಕೊಂಡಿದ್ದಾರೆ.