ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ತಮಿಳುನಾಡಿನ ಓಂ ಶಕ್ತಿ ದೇವಸ್ಥಾನದ ಪ್ರವಾಸ ಮುಗಿಸಿ ಬಂದವರಲ್ಲಿ ಇದುವರೆಗೆ 83 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಶಿವಮೊಗ್ಗ, ಭದ್ರಾವತಿಯಲ್ಲಿ ಹೈರಿಸ್ಕ್ ಇದೆ.
ಓಂ ಶಕ್ತಿ ಪ್ರವಾಸಕ್ಕೆ ಒಟ್ಟು 4,153 ಜನರು ಹೋಗಿ ವಾಪಸ್ ಶಿವಮೊಗ್ಗಕ್ಕೆ ಬಂದಿದ್ದಾರೆ. ಅವರ ಪೈಕಿ ಕೋವಿಡ್ ರೋಗದ ಲಕ್ಷಣ ಇರುವ 1,211 ಮಂದಿಗೆ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಇದುವರೆಗೆ 83 ಸೋಂಕು ದೃಢಪಟ್ಟಿದೆ.