ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಭದ್ರಾವತಿ ಮಹಿಳೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದು, ಮನನೊಂದು ಆಕೆ ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭದ್ರಾವತಿಯ ಯಡೇಹಳ್ಳಿ ಗ್ರಾಮದ ನಿವಾಸಿ ವೀಣಾ(32) ಅವರು ತನ್ನ ಏಳು ವರ್ಷದ ಹಾಗೂ ಒಂದು ವರ್ಷದ ಮಕ್ಕಳೊಂದಿಗೆ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

BDVT FB GROUP LINK

ಅರಹತೋಳಲು ಗ್ರಾಮದ ನಿವಾಸಿಗಳಾದ ಸಂತೋಷ ಹಾಗೂ ಆತನ ಪತ್ನಿ ಆಶಾ ಅವರು ವೀಣಾ ಅವರ ಬಳಿಯಿಂದ 8 ಲಕ್ಷ ರೂಪಾಯಿ ಸಾಲವಾಗಿ ಪಡೆದಿದ್ದರು. ಸಾಲದ ಹಣವನ್ನು ವಾಪಾಸ್ ಕೊಡಿ ಎಂದು ಕೇಳಿದಾಗ ಸಂತೋಷ ಹಾಗೂ ಆಶಾ ಅವರು ವೀಣಾಳಿಗೆ ಹಣವನ್ನು ಹಿಂದಿರುಗಿಸದೇ ಆಕೆಯು ಬೇರೆಯವರ ಜೊತೆ ಸಂಬಂಧ ಹೊಂದಿರುವುದಾಗಿ ಅಪ ಪ್ರಚಾರ ಮಾಡಿದ್ದರು.

ಮನನೊಂದ ವೀಣಾ ಅವರು ಜನವರಿ 13ರಂದು ಸಂಜೆ ಸಂಕ್ರಾಂತಿ ಹಬ್ಬಕ್ಕೆ ತನ್ನ ತವರು ಮನೆ ಹೊಳಲ್ಕೆರೆಗೆ ಹೋಗುತ್ತೇನೆಂದು ಹೇಳಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಹೋಗಿದ್ದಾರೆ. ಹಂಚಿನ ಸಿದ್ದಾಪುರ ಗ್ರಾಮ ಬಳಿಯ ಭದ್ರಾ ನಾಲೆಗೆ ಹಾರಿ ಮೃತಪಟ್ಟಿದ್ದು ನಂತರ ವೀಣಾಳ ಮೃತ ದೇಹವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯ ಹತ್ತಿರ ಭದ್ರಾ ನಾಲೆಯಲ್ಲಿ ದೊರೆತಿರುತ್ತದೆ ಎಂದು ಮೃತಳ ಪತಿಯು ದೂರು ನೀಡಿದ್ದಾರೆ.

ಇನ್ನೊಂದು ಮಗುವಿನ ಶವ ಶೋಧ ಕಾರ್ಯ

ವೀಣಾಳ 7 ವರ್ಷದ ಮಗುವಿನ ಮೃತ ದೇಹವು ಚನ್ನಗಿರಿಯ ನಲ್ಲೂರು ಬಳಿಯ ಭದ್ರಾ ಚಾನಲ್ ನಲ್ಲಿ ದೊರೆತಿದ್ದು, ಮತ್ತೊಬ್ಬ ಮಗಳ ಪತ್ತೆ ಕಾರ್ಯ ಮುಂದುವರೆದಿದೆ.
ಆರೋಪಿಗಳನ್ನು ಬಂಧಿಸಿದ ಪೊಲೀಸ್
ಮೃತಳ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಪೊಲೀಸರು ಆರೋಪಿ ಅರಹತೊಳಲು ಗ್ರಾಮ ನಿವಾಸಿ ಸಂತೋಷ (35) ಅವರನ್ನು ಬಂಧಿಸಲಾಗಿದೆ.

https://www.suddikanaja.com/2021/07/09/ganja-arrest/

error: Content is protected !!