ಇಂಧನ ಇಲಾಖೆಯಲ್ಲಿ ‘ಕನ್ನಡ’ಕ್ಕೆ ಮಣೆ, ಮಾತೃ ಭಾಷೆ ಪಾಸ್ ಆದರಷ್ಟೇ ಅರ್ಹತಾ ಪರೀಕ್ಷೆಗೆ ಎಲಿಜಿಬಲ್

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಬೆಂಗಳೂರು: ರಾಜ್ಯ ಸರ್ಕಾರ ಇಂಧನ ಇಲಾಖೆಯ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಉದ್ದೇಶದಿಂದ ಮಹತ್ವದ ನಿರ್ಧಾರವೊಂದು ಕೈಗೊಂಡಿದೆ. ಇದರಿಂದ ಕನ್ನಡಿಗರಿಗೆ ನ್ಯಾಯ ಸಿಗಲಿದೆ.
ಇಂಧನ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 1ರಂದು ಅಧಿಸೂಚನೆಯನ್ನು ಪ್ರಕಟಿಸಿದ್ದು, 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಾರ್ಚ್ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

JOBS FB Link

READ | ಎಂಜಿನಿಯರ್, ಸಹಾಯಕ ಹುದ್ದೆಗಳಿಗೆ ಡಿಟೇಲ್ಡ್ ಅಧಿಸೂಚನೆ, ಎಷ್ಟು ಹುದ್ದೆಗಳ ಭರ್ತಿ, ಆಯ್ಕೆ ವಿಧಾನ ಹೇಗೆ?

ಕನ್ನಡದಲ್ಲಿ 50 ಅಂಕ ಪಡೆಯುವುದು ಕಡ್ಡಾಯ

  • ಗ್ರೂಪ್ ಬಿ ಮತ್ತು ಸಿ ಪದ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕನ್ನಡ ಪರೀಕ್ಷೆಯನ್ನು ಬರೆಯಬೇಕು. ಅದರಲ್ಲಿ 50 ಅಂಕಗಳನ್ನು ಗಳಿಸಿದರೆ ಮಾತ್ರ ಅರ್ಹತಾ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.
  • ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಮೇಲ್ಪಟ್ಟ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಇಲ್ಲವೇ ಐಚ್ಛಿಕ ಭಾಷೆಯಾಗಿ ಇಲ್ಲವೇ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೆ ಅಂತಹವರಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಡಿಪ್ಲೋಮಾ, ಎಂಜಿನಿಯರಿಂಗ್ ನಲ್ಲಿ ಕನ್ನಡ ಭಾಷೆಯಲ್ಲಿ ಉತ್ತೀರ್ಣರಾದವರಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು.
  • ಒಂದುವೇಳೆ, ಕನ್ನಡ ಭಾಷೆಯನ್ನು ಅಧ್ಯಯನ ಮಾಡದೇ ಇದ್ದರೆ ಅಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಬೇಕು. ಅದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕು.

READ | KPTCL ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

2015ರಲ್ಲಿ ಕನ್ನಡ ಪರೀಕ್ಷೆಯಿಂದ ವಿನಾಯಿತಿ
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅವಧಿಯಲ್ಲಿ 2015ರಲ್ಲಿ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಕನ್ನಡ ಪರೀಕ್ಷೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಅದರಿಂದಾಗಿ, ಪರ ರಾಜ್ಯದ ಅಭ್ಯರ್ಥಿಗಳು ಇಂಧನ ಇಲಾಖೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ರಾಜ್ಯ ಸರ್ಕಾರ ಕನ್ನಡ ಪರೀಕ್ಷೆಯನ್ನು ಮೊದಲೇ ನಡೆಸುತ್ತಿದೆ. ಇದರಲ್ಲಿ ಫೇಲ್ ಆದ ಅಭ್ಯರ್ಥಿಗಳು ಆಪ್ಟಿಟ್ಯೂಡ್ ಪರೀಕ್ಷೆ ಬರೆಯಲು ಅವಕಾಶವೇ ಇರುವುದಿಲ್ಲ.

https://www.suddikanaja.com/2021/11/20/npci-maping-is-mandatory-for-post-metric-student-scholarship/

error: Content is protected !!