ಬ್ಯಾಂಕ್ ಆಫ್ ಬರೋಡಾದಲ್ಲಿ ಡಿಗ್ರಿ, ಪಿಜಿ ಪಾಸ್ ಆದವರಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ 9 ದಿನ ಬಾಕಿ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ (ಬಿಓಬಿ) bank of baroda  220 ಹುದ್ದೆ (vacancy) ಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಫೆಬ್ರವರಿ 14ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಜೋನಲ್ ಸೇಲ್ಸ್ ಮ್ಯಾನೇಜರ್( Zonal Sales Manager), ಮ್ಯಾನೇಜರ್ (Manager) ಹುದ್ದೆಗಳ ನೇಮಕಾತಿ ನಡೆಯಲಿದ್ದು, ಪದವಿ(degree), ಸ್ನಾತಕೋತ್ತರ (PG) ಪದವಿ, ಬ್ಯಾಂಕಿಂಗ್ ವ್ಯವಹಾರದಲ್ಲಿ ಡಿಪ್ಲೋಮಾ/ ಸೇಲ್ಸ್/ ಕ್ರೆಡಿಟ್/ ಫೈನ್ಯಾನ್ಸ್ ವಿದ್ಯಾರ್ಹತೆ ಹೊಂದಿರಬೇಕು.

JOBS FB Link

READ | ಎಂಜಿನಿಯರ್, ಸಹಾಯಕ ಹುದ್ದೆಗಳಿಗೆ ಡಿಟೇಲ್ಡ್ ಅಧಿಸೂಚನೆ, ಎಷ್ಟು ಹುದ್ದೆಗಳ ಭರ್ತಿ, ಆಯ್ಕೆ ವಿಧಾನ ಹೇಗೆ?

ಆಯಾ ಹುದ್ದೆಗಳಿಗೆ ಅನುಗುಣವಾಗಿ ಕಾರ್ಯಾನುವ ಮತ್ತು ಮುಂದಾಳತ್ವ ಹೊಂದಿರಬೇಕು. ಜೊತೆಗೆ, 22 ವರ್ಷದಿಂದ 48 ವರ್ಷದವರೆಗೆ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ವಯೋಮಿತಿ ಸಡಿಲಿಕೆಯೂ ಅನ್ವಯವಾಗಲಿದೆ. ಪೂರ್ಣ ವಿವರ ಅಧಿಸೂಚನೆಯಲ್ಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ ಸೈಟ್ ನಲ್ಲಿ ಜನವರಿ 24ರಿಂದ ಫೆ.14ರೊಳಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಸರಿಯಾದ ಇಮೇಲ್ ಐಡಿ, ಮೊಬೈಲ್ ನಂಬರ್ ಹೊಂದಿರಬೇಕು. ದಾಖಲೆಗಳ ಸ್ಕ್ಯಾನ್ ಮಾಡಿರುವ ಪ್ರತಿ ಇರಬೇಕು.
ಸಂಸ್ಥೆ | ಬ್ಯಾಂಕ್ ಆಫ್ ಬರೋಡಾ
ಹುದ್ದೆ | ಜೋನಲ್ ಸೇಲ್ಸ್ ಮ್ಯಾನೇಜರ್, ಮ್ಯಾನೇಜರ್
ಉದ್ಯೋಗ ಸ್ಥಳ | ಭಾರತದಾದ್ಯಂತ
ಅರ್ಜಿ ಸಲ್ಲಿಕೆ ವಿಧಾನ | ಆನ್ ಲೈನ್
ಹುದ್ದೆ ಸಂಖ್ಯೆ | 220

   NOTIFICATION

   CLICK HERE TO APPLY

ಹುದ್ದೆ ಹೆಸರು ಹುದ್ದೆ
ಜೋನಲ್ ಸೇಲ್ಸ್ ಮ್ಯಾನೇಜರ್ – MSME ವ್ಯಾಪಾರ 5
ಜೋನಲ್ ಸೇಲ್ಸ್ ಮ್ಯಾನೇಜರ್ – MSME – LAP / ಅನ್ ಸೆಕ್ಯೂರ್ಡ್ ಬಿಜಿನೆಸ್  2
ಜೋನಲ್ ಸೇಲ್ಸ್ ಮ್ಯಾನೇಜರ್ – MSME – CV / CME 4
ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ (ಟ್ರಾಕ್ಟರ್ ಸಾಲ) 9
ಸಹಾಯಕ ಉಪಾಧ್ಯಕ್ಷ MSME- ಮಾರಾಟ 40
ಸಹಾಯಕ ಉಪಾಧ್ಯಕ್ಷ MSME – ಮಾರಾಟ- LAP / ಅಸುರಕ್ಷಿತ ವ್ಯಾಪಾರ ಸಾಲಗಳು 2
ಸಹಾಯಕ ಉಪಾಧ್ಯಕ್ಷ MSME – ಮಾರಾಟದ CV / CME ಸಾಲಗಳು 8
ಹಿರಿಯ ವ್ಯವಸ್ಥಾಪಕ MSME- ಮಾರಾಟ 50
ಹಿರಿಯ ವ್ಯವಸ್ಥಾಪಕ MSME – ಮಾರಾಟ – LAP / ಅಸುರಕ್ಷಿತ ವ್ಯಾಪಾರ ಸಾಲಗಳು 15
ಹಿರಿಯ ವ್ಯವಸ್ಥಾಪಕ MSME -ಮಾರಾಟ CV / CME ಸಾಲಗಳು 30
ಹಿರಿಯ ವ್ಯವಸ್ಥಾಪಕ MSME – ಮಾರಾಟದ ಫಾರೆಕ್ಸ್ (ರಫ್ತು / ಆಮದು ವ್ಯಾಪಾರ) 15
ಮ್ಯಾನೇಜರ್ MSME- ಮಾರಾಟ 40
ಒಟ್ಟು 220

https://www.suddikanaja.com/2021/09/30/jobs-in-bmrcl/

error: Content is protected !!