Zero Traffic | ಆನೆ ದಾಳಿಗೆ ಒಳಗಾಗಿದ್ದ ಡಾ.ವಿನಯ್ ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಶಿಫ್ಟ್

DR Vinay

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿ ಡಾ.ವಿನಯ್ (Dr.Vinay) ಅವರನ್ನು ಝೀರೋ ಟ್ರಾಫಿಕ್ (Zero Traffic) ಮೂಲಕ ಬೆಂಗಳೂರಿನ ಆಸ್ಪತ್ರೆ(Bengaluru hospital)ಗೆ ಶಿಫ್ಟ್ ಮಾಡಲಾಗಿದೆ.
ಇತ್ತೀಚೆಗೆ ದಾವಣಗೆರೆ (Davanagere) ಜಿಲ್ಲೆ ನ್ಯಾಮತಿ (Nyamathi) ತಾಲೂಕಿನ ಜೀನಹಳ್ಳಿಯಲ್ಲಿ ಆನೆ ಕಾರ್ಯಾಚರಣೆ (Elephant capturing operation) ನಡೆಸುವಾಗ ಕಾಡಾನೆ(Wild tusk)ಯು ಇವರ ಮೇಲೆ ದಾಳಿ ನಡೆಸಿತ್ತು. ಪರಿಣಾಮ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ(Shimoga)ದಲ್ಲಿ ದಾಖಲಿಸಲಾಗಿತ್ತು. ಆದರೆ, ಹೆಚ್ಚುವರಿ ಚಿಕಿತ್ಸೆ ಅಗತ್ಯವಿರುವುದರಿಂದ ಅವರನ್ನು ವಿಶೇಷ ಆಂಬ್ಯುಲೆನ್ಸ್ (Special ambulance) ನಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

READ | ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಲ್ಲಿರುವ ಮತದಾರರೆಷ್ಟು? ಹೊಸ ಮತದಾನ ಕೇಂದ್ರಗಳಿಗೆ ಶಿಫಾರಸು

ಎಕ್ಮೋ ಸಪೋರ್ಟ್ ನೊಂದಿಗೆ ಶಿಫ್ಟ್
ಡಾ.ವಿನಯ್ ಅವರಿಗೆ ಬುಧವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ, ಎಕ್ಮೋ ಸಪೋರ್ಟ್ ಅಗತ್ಯವಿರುವುದರಿಂದ ಅಳವಡಿಸಲಾಗಿದೆ. ಬಳಿಕ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಝಿರೋ ಟ್ರಾಫಿಕ್ ವ್ಯವಸ್ಥೆ
ಡಾ.ವಿನಯ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ವಿಶೇಷ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ನಗರದಿಂದ ಬೆಂಗಳೂರಿಗೆ ತೆರಳುವ ಮಾರ್ಗದುದ್ದಕ್ಕೂ ಮುಂದೆ ಪೊಲೀಸ್ ವಾಹನವಿರಲಿದ್ದು, ಹಿಂದೆ ಆಂಬ್ಯುಲೆನ್ಸ್ ಸಂಚರಿಸಲಿದೆ. ಆಂಬ್ಯುಲೆನ್ಸ್ ತೆರಳುವ ವೇಳೆ ನಂಜಪ್ಪ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ನಡೆದಿದ್ದೇನು?
ಚನ್ನಗಿರಿ ತಾಲೂಕು ಸೂಳೆಕೆರೆ ಸಮೀಪ ಬಾಲಕಿಯೊಬ್ಬಳನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ಇದರ ಬೆನ್ನಲ್ಲೇ ಆನೆಯನ್ನು ಸೆರೆಹಿಡಿಯುವುದಕ್ಕೆ ಒತ್ತಾಯದ ಕೂಗುಗಳು ಕೇಳಿಬಂದಿದ್ದವು. ಆಗ ಕಾಡಾನೆಯನ್ನು ಹಿಡಿಯುವುದಕ್ಕೆ ಸಕ್ರೆಬೈಲಿನ ತಂಡ ತೆರಳಿತ್ತು. ಪಶುವೈದ್ಯರಾದ ಡಾ.ವಿನಯ್ ಅವರು ಆ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು (ಡಾರ್ಟ್) ನೀಡುವಾಗ ಆನೆಯ ವೈದ್ಯರ ಮೇಲೆ ದಾಳಿ ನಡೆಸಿತ್ತು. ಇವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Arrest | ಗನ್ ಹಿಂಭಾಗದಿಂದ ಹಲ್ಲೆ ಮಾಡಿದ್ದ ಅಜರ್ ಅರೆಸ್ಟ್, ವಿಚಾರಣೆ ವೇಳೆ ಸಿಕ್ಕಿದ್ದೇನು?

error: Content is protected !!