ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಭಾನುವಾರ ಇಳಿಕೆಯಾಗಿದ್ದು, ಗುಣಮುಖರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
165 ಜನರಲ್ಲಿ ಸೋಂಕು ದೃಢಪಟ್ಟಿದ್ದು, 340 ಚಿಕಿತ್ಸೆ ಪಡೆದು ಸ್ವಸ್ಥರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 40, ಭದ್ರಾವತಿಯಲ್ಲಿ 31, ತೀರ್ಥಹಳ್ಳಿಯಲ್ಲಿ 21, ಶಿಕಾರಿಪುರದಲ್ಲಿ 19, ಸಾಗರದಲ್ಲಿ 27, ಹೊಸನಗರದಲ್ಲಿ 8, ಸೊರಬದಲ್ಲಿ 15 ಹಾಗೂ ಬಾಹ್ಯ ಜಿಲ್ಲೆಯ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
ಸಕ್ರಿಯ ಪ್ರಕರಣಗಳ ಸಂಖ್ಯೆಯು ಜಿಲ್ಲೆಯಲ್ಲಿ 1932 ಇದೆ. ಕೋವಿಡ್ ಆಸ್ಪತ್ರೆಯಲ್ಲಿ 57, ಡಿಸಿ.ಎಚ್.ಸಿನಲ್ಲಿ 17, ಖಾಸಗಿ ಆಸ್ಪತ್ರೆಯಲ್ಲಿ 6 ಹಾಗೂ ಮನೆ ಆರೈಕೆಯಲ್ಲಿ 1852 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.