ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ ಸಂಚಾರ, ಮರಿಗಳೊಂದಿಗೆ ಹಲವೆಡೆ ಪ್ರತ್ಯಕ್ಷ, ಶಾಲೆಗೆ ಹೋಗುವ ಮಕ್ಕಳಲ್ಲೂ ಭೀತಿ

 

 

ಸುದ್ದಿ ಕಣಜ.ಕಾಂ | TALUK | WILD LIFE
ಸಾಗರ: ತಾಲೂಕಿನ ಕೋಗಾರು ಸಮೀಪದ ಜನರು ಚಿರತೆ ಸಂಚಾರದಿಂದಾಗಿ ಭಯಭೀತರಾಗಿದ್ದಾರೆ. ಕಾರಣಿ, ನಲ್ಯಾರ, ಅಬ್ಬಿನಾಲೆ, ಹೆರಬೆಟ್ಟು, ಹಲಿಗೇರೆ ಭಾಗದಲ್ಲಿ ಚಿರತೆಯೊಂದು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

READ | ನಿರಂತರ ರಜೆಗಳ ಬಳಿಕ ಶಾಲೆ ಕಾಲೇಜು ಪುನರಾರಂಭ, ಹೇಗಿದೆ ಫಸ್ಟ್ ಡೇ?

ಮಲೆನಾಡಿನ ಕುಗ್ರಾಮದಿಂದ ಶಾಲೆಗಳಿಗೆ ಹೋಗಬೇಕಾದರೆ ಮಕ್ಕಳು ನಡೆದುಕೊಂಡೇ ಹೋಗಬೇಕು. ಆದರೆ, ಚಿರತೆ ಪ್ರತ್ಯಕ್ಷವಾಗಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಭಯ ಪಡುವಂತಾಗಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ, ‘ಚಿರತೆ ಇದುವರೆಗೆ ಯಾರ ಮೇಲೆಯೂ ದಾಳಿ ನಡೆಸಿಲ್ಲ. ಚಿರತೆ ಹಿಡಿಯುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

error: Content is protected !!