ಶಿವಮೊಗ್ಗದ ಸೆಂಟ್ರಲ್ ಜೈಲಿನೊಳಗೆ ಗಾಂಜಾ ಎಸೆಯುತ್ತಿದ್ದ ಮೂವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದೊಳಗೆ ಗಾಂಜಾ ಎಸೆಯುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಎಂ.ಎಲ್ ನಗರದ ಅಜರುದ್ದೀನ್(24), ಶಿವಮೊಗ್ಗದ ಕ್ಲಾರ್ಕ್ ಪೇಟೆಯ ಮಹಮ್ಮದ್ ಫೈಸಲ್(20), ಭರ್ಮಪ್ಪ ನಗರದ ರೋಷನ್ ಜಮೀರ್(19) ಬಂಧಿತರು.

READ | ಶಿವಮೊಗ್ಗ ನಗರದಲ್ಲಿ ನಾಲ್ಕು ದಿನ ನಿಷೇಧಾಜ್ಞೆ ಜಾರಿ, ಯಾವಾಗಿಂದ ಅನ್ವಯ, ಆದೇಶದಲ್ಲೇನಿದೆ?

ಖಚಿತ ಮಾಹಿತಿಯ ಮೇರೆಗೆ ತುಂಗಾನಗರ ಠಾಣೆಯ ಪಿಎಸ್.ಐ ಮತ್ತು ಸಿಬ್ಬಂದಿಯ ತಂಡವು ಪಶ್ಚಿಮ ದಿಕ್ಕಿನ ಕಾಂಪೌಂಡ್ ಹಿಂಭಾಗ ಕಾಯುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಕಪ್ಪು ಬಣ್ಣದ ಪ್ಲಾಸ್ಟಿಕ್ ಗಮ್ ಟೇಪ್ ಸುತ್ತಿದ ವಸ್ತುವನ್ನು ಕಾರಾಗೃಹದ ಕಾಂಪೌಂಡ್ ಒಳಗೆ ಎಸೆಯಲು ಹೋದಾಗ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 9,000 ರೂಪಾಯಿ ಮೌಲ್ಯದ 240 ಗ್ರಾಂ. ಗಾಂಜಾ, 1 ಮೊಬೈಲ್, ಕೃತ್ಯಕ್ಕೆ ಬಳಸಿದ ಮೊಪೆಡ್ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ತುಂಗಾ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://www.suddikanaja.com/2021/01/12/video-call-facility-in-shivamogga-central-jail/

error: Content is protected !!