ಹೊಳೆಹೊನ್ನೂರಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬುಲೆರೋ ಕಳವು

 

 

ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನವನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಅಡಿಕೆ ವ್ಯವಹಾರಕ್ಕಾಗಿ ಮೊಹ್ಮದ್ ಜಕ್ರಿಯಾ ಎಂಬುವವರು ಒಂದು ವರ್ಷದ ಹಿಂದಷ್ಟೇ ವಾಹನವನ್ನು ಖರೀದಿಸಿದ್ದರು.
ಜಕ್ರಿಯಾ ಅವರು ಶುಕ್ರವಾರ ಸಂಬಂಧಿಕರ ಮದುವೆಗೆ ಆಗಮಿಸಿ ವಾಪಸ್ ಊರಿಗೆ ಹೋಗಿದ್ದಾರೆ. ಆಗ ಬುಲೆರೋ ವಾಹನ ಕಳವಾಗಿರುವುದು ಗಮನಕ್ಕೆ ಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!