Today Gold Rate ಬಂಗಾರದ ಬೆಲೆಯಲ್ಲಿ ದಾಖಲೆಯ ಏರಿಕೆ, 9 ದಿನಗಳ ರೇಟ್ ಇಲ್ಲಿದೆ

ಸುದ್ದಿ ಕಣಜ.ಕಾಂ | KARNATAKA | MARKET TRENDS 
ಬೆಂಗಳೂರು: ಮದುವೆ ಸೀಸನ್ ಶುರುವಾಗಿದ್ದೇ ಚಿನ್ನದ ಬೆಲೆಯಲ್ಲೂ ಭಾರಿ ಏರಿಕೆಯಾಗಿದ್ದು, ಬುಧವಾರ ದಾಖಲೆಯ ಏರಿಕೆಯಾಗಿದೆ. ಈ ಮೂಲಕ ಚಿನ್ನಾಭರಣ ಪ್ರಿಯರಿಗೆ ಶಾಕ್ ನೀಡಿದೆ. ಚಿನ್ನವನ್ನೇ ಹೂಡಿಕೆ ರೂಪದಲ್ಲಿ ಬಳಸುವವರಿಗೆ ಇದು ವರದಾನವಾಗಲಿದೆ. 
ಫೆಬ್ರವರಿಯಲ್ಲಿ ಸ್ಥಿರವಾಗಿದ್ದ ಚಿನ್ನದ ಬೆಲೆಯು ಮಾರ್ಚ್ ನಿಂದ ಮೇಲಕ್ಕೇರಲಾರಂಭಿಸಿದೆ. ಅದರಲ್ಲೂ ಮಾರ್ಚ್ 4ರಿಂದ ಈಚೆಗೆ ಬೆಲೆ ಗಗನಮುಖಿಯಾಗಿ ಸಾಗುತ್ತಿದೆ.

READ | ವಂಚಿಸಿದ ತೆರಿಗೆ ವಸೂಲು ಮಾಡಿದ ಕನ್ನಡಿಗ ಅಧಿಕಾರಿಗೆ ರಾಷ್ಟ್ರಪತಿ ಪುರಸ್ಕಾರ

55 ಸಾವಿರ ಗಡಿ ದಾಟಿದ ಅಪರಂಜಿ
ಮಾರ್ಚ್ 9ಕ್ಕೆ 22 ಕ್ಯಾರೆಟ್ ಬೆಲೆ 50,700 ರೂಪಾಯಿ ಹಾಗೂ 24 ಕ್ಯಾರೆಟ್ ಬೆಲೆ 55,310 ರೂಪಾಯಿ ಆಗಿದೆ. ಮಂಗಳವಾರಕ್ಕ ಹೋಲಿಸಿದರೆ ಬುಧವಾರ ಪ್ರತಿ 10 ಗ್ರಾಂಗೆ ಅಪರಂಜಿಯಲ್ಲಿ 1,420 ರೂಪಾಯಿ ಏರಿಕೆ ಕಂಡುಬಂದಿದೆ. ಇದು ಗ್ರಾಹಕರ ಜೇಬು ಸುಡುತ್ತಿದೆ. ಕಳೆದ ಒಂದು ವಾರದ ಬೆಳವಣಿಗೆ ಗಮನಿಸಿದರೆ ಸದ್ಯಕ್ಕೆ ಬೆಲೆಗೆ ಅಂಕುಶ ಹಾಕುವುದು ಕಷ್ಟ ಎನ್ನಲಾಗುತ್ತಿದೆ.

ಮಾರ್ಚ್ ತಿಂಗಳ ಚಿನ್ನದ ದರದ ಮಾಹಿತಿ
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಮಾರ್ಚ್ 1 46,700 50,950
ಮಾರ್ಚ್ 2 47,700 52,040
ಮಾರ್ಚ್ 3 47,300 51,600
ಮಾರ್ಚ್ 4 47,700 52,040
ಮಾರ್ಚ್ 5 48,400 52,800
ಮಾರ್ಚ್ 6 48,400 52,800
ಮಾರ್ಚ್ 7 49,400 53,890
ಮಾರ್ಚ್ 8 49,400 53,890
ಮಾರ್ಚ್ 9 50,700 55,310

ರಷ್ಯಾ ಉಕ್ರೇನ್ ಯುದ್ಧದ ಸೈಡ್ ಎಫೆಕ್ಟ್
ಹೊಸ ವರ್ಷದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಹಳದಿ ಲೋಹದ ಬೆಲೆ ಮಾತ್ರ ನಿಧಾನವಾಗಿ ಇಳಿಕೆಯಾಗುತ್ತಲೇ ಇತ್ತು. ಫೆಬ್ರವರಿ ತಿಂಗಳಿನಲ್ಲಿ ಅತ್ಯಧಿಕವೆಂದರೆ 24 ಕ್ಯಾರೆಟ್ ಗೆ 51,500 ರೂಪಾಯಿ ಹಾಗೂ ಅತೀ ಕಡಿಮೆ ಎಂದರೆ 48,980 ರೂ. ಬೆಲೆ ನಿಗದಿಯಾಗಿತ್ತು. ಆದರೆ, ರಷ್ಯಾ, ಉಕ್ರೇನ್ ನಡುವೆ ಯುದ್ಧ ಆರಂಭವಾಗಿದ್ದೇ ಚಿನ್ನದ ಬೆಲೆ ಮೇಲಕ್ಕೇರಲು ಆರಂಭಿಸಿದೆ. ಮಾರ್ಚ್ 7ರಂದು ಪ್ರತಿ 10 ಗ್ರಾಂ.ಗೆ 1,090 ರೂ. ಬೆಲೆ ಏರಿಕೆಯಾಗುವ ಮೂಲಕ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಹಿಂದಿಟ್ಟು ಬುಧವಾರ 1,420 ರೂ. ದರ ಏರಿಕೆ ಕಂಡಿದೆ.

ಚಿನ್ನಾಭರಣ ಪ್ರಿಯರಿಗೆ ಶಾಕ್, ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ