ದಿಢೀರ್ ಕೈಕೊಟ್ಟ BSNL, ಮಲೆನಾಡಲ್ಲಿ ಮತ್ತೆ ನೆಟ್ವರ್ಕ್ ಪ್ರಾಬ್ಲಂ

ಸುದ್ದಿ ಕಣಜ.ಕಾಂ | TALUK | CITIZEN VOICE
ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡೆ ಗ್ರಾಮದಲ್ಲಿರುವ ಬಿಎಸ್.ಎನ್.ಎಲ್ ಟಾವರ್ ನಿಷ್ಕ್ರಿಯಗೊಂಡಿದ್ದು, ಗ್ರಾಹಕರು ಪರದಾಡುತಿದ್ದಾರೆ.

READ | ಕೋಟೆ ಮಾರಿಕಾಂಬ ಜಾತ್ರೆ, ಅಮ್ಮನ ಮಡಿಲಿನಲ್ಲಿ ‘ಅಪ್ಪು’ ಭಾವಚಿತ್ರ, ವೈರಲ್ ಆಯ್ತು ವಿಡಿಯೋ

ಮೊದಲೇ ಮೊಬೈಲ್ ಗಳಿಗೆ ಸರಿಯಾಗಿ ನೆಟ್ವರ್ಕ್ ಸಿಗದೇ ಮಲೆನಾಡಿನ ಪ್ರದೇಶಗಳ ಜನರು ಸಂಪರ್ಕಕ್ಕಾಗಿ ಕಷ್ಟಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಎಸ್.ಎನ್.ಎಲ್. ಟವರ್ ನಿಷ್ಕ್ರಿಯಗೊಂಡಿದ್ದರಿಂದ ತೊಂದರೆ ಇನ್ನಷ್ಟು ಉಲ್ಬಣಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.
ಎಲ್ಲೆಲ್ಲಿ ನೆಟ್ವರ್ಕ್ ಸಮಸ್ಯೆ
ತೊರೆಬೈಲು, ಕುಂಟಿಹೊಳೆ, ಚಿಕ್ಕಮತ್ತಿಗ, ಹೊಸಕೊಪ್ಪ, ಆಲೂರು, ಮಳಲಿಮಕ್ಕಿ, ಸಿದ್ಧಾಪುರ, ಮಾವಿನಗದ್ದೆ, ಹುಲಿಮನೆ, ವಾಟುಗಾರು, ದೊಡ್ಡಮತ್ತಿಗ, ಹಾರಂಬಳ್ಳಿ, ಯೋಗಿ ಮಳಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ.

READ | ಈಜಲು ಹೋದವರು ಶವವಾಗಿ ಪತ್ತೆ

ಟವರ್ ಗೆ ಕರೆಂಟ್ ಕಾಟ
ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ಟವರ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುತ್ತದೆ. ಈ ಸಮಸ್ಯೆ ಹಲವು ತಿಂಗಳುಗಳಿಂದ ಇದೆ. ತಾಂತ್ರಿಕ ಸಮಸ್ಯೆ ಇದುವರೆಗೆ ಪರಿಹಾರ ನೀಡಲಾಗಿಲ್ಲ ಎಂದು ಗ್ರಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.