ತೀರ್ಥಹಳ್ಳಿಗೆ ಮತ್ತೆ ಮಂಗನ ಕಾಯಿಲೆ ಶಾಕ್, ಪಾಸಿಟಿವ್ ಪ್ರಕರಣದಲ್ಲಿ ಹೆಚ್ಚಳ, ಇದುವರೆಗೆ ಪತ್ತೆಯಾದ ಪ್ರಕರಣಗಳೆಷ್ಟು?

ಸುದ್ದಿ ಕಣಜ.ಕಾಂ | TALUK | HEALTH NEWS
ತೀರ್ಥಹಳ್ಳಿ: ಮಂಗನ ಕಾಯಿಲೆ ಮತ್ತೆ ಮಲೆನಾಡಿಗರನ್ನು ಕಾಡಲು ಆರಂಭಿಸಿದೆ. ತಾಲೂಕಿನ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಇಬ್ಬರಿಗೆ ಪಾಸಿಟಿವ್ ಬಂದಿದೆ.
ಕುರುವಳ್ಳಿ ಗ್ರಾಮದ 69 ಹಾಗೂ ಹಿರೇಬೈಲು ಗ್ರಾಮದ 47 ವರ್ಷದ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.

ಇದುವರೆಗೆ 18 ಪ್ರಕರಣಗಳು ಪತ್ತೆ
ಜಿಲ್ಲೆಯ ತೀರ್ಥಹಳ್ಳಿ ತಾಲೂಕುವೊಂದರಲ್ಲೇ ಈ ವರ್ಷ 18 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಲ್ಲಿ ಮೊದಲ ಪ್ರಕರಣ ಕಂಡುಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ನಿರಂತರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.
ದರಗು ತರಲು ಹೋಗಿದ್ದ ಮಹಿಳೆಯರು
ಮಂಗನ ಕಾಯಿಲೆಗೆ ತುತ್ತಾಗಿರುವ ಇಬ್ಬರೂ ಮಹಿಳೆಯರು ದರಗು ತರಲು ಕಾಡಿಗೆ ಹೋಗಿದ್ದರು. ಅಲ್ಲಿಯೇ ಸೋಂಕು ತಗುಲಿರಬಹುದು ಎನ್ನಲಾಗಿದೆ. ರೋಗದ ಲಕ್ಷಣಗಳನ್ನು ಹೊಂದಿರುವವರಲ್ಲಿ ಒಬ್ಬರಿಗೆ ಜೆಸಿ ಆಸ್ಪತ್ರೆಗೆ ಹಾಗೂ ಇನ್ನೊಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ.