MODEL CITIZEN | 30 ಚೀಲ ‘ಅನ್ನ ಭಾಗ್ಯ’ ಅಕ್ಕಿ ಸೀಜ್, ಸಾರ್ವಜನಿಕರೇ ಹಿಡಿದು ಪ್ರಶ್ನಿಸಿದ್ದಕ್ಕೆ ಬಯಲಿಗೆ ಸತ್ಯ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ರಿಪ್ಪನಪೇಟೆಯಲ್ಲಿ ಅನ್ನ ಭಾಗ್ಯ ಯೋಜನೆ ಅಡಿ ಬಡವರಿಗೆ ಪೂರೈಕೆ ಮಾಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಸಾಗಿಸುತ್ತಿದ್ದಾಗ ಅದನ್ನು ಸಾರ್ವಜನಿಕರೇ ಹಿಡಿದು ಪ್ರಶ್ನಿಸಿದ್ದಾರೆ. ಪರಿಣಾಮ ನ್ಯಾಯಬೆಲೆ ಅಂಗಡಿಯಿಂದ ರೈಸ್ ಮಿಲ್ ಗೆ ಕೊಂಡೊಯ್ಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಜವಾಬ್ದಾರಿಯುತ ನಾಗರಿಕರಿಂದ 30 ಚೀಲ ಅಕ್ಕಿ ಸೀಜ್
ನ್ಯಾಯಬೆಲೆ ಅಂಗಡಿಯಿಂದ ರೈಸ್ ಮಿಲ್ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರೇ ಹಿಡಿದು ಪ್ರಶ್ನಿಸಿದ್ದಾರೆ. ಆಗ ಸರಿಯಾದ ಉತ್ತರ ನೀಡಲು ಚಾಲಕನಿಂದ ಸಾಧ್ಯವಾಗಿಲ್ಲ. ತಕ್ಷಣ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಪರಿಶೀಲನೆ ಬಳಿಕ ದೂರು ದಾಖಲು
ಗೂಡ್ಸ್ ಪರಿಶೀಲನೆ ಮಾಡಿದಾಗ ಅಕ್ಕಿಯು ಅನ್ನ ಭಾಗ್ಯ ಯೋಜನೆಯದ್ದಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ನ್ಯಾಯಬೆಲೆ ಅಂಗಡಿಯ ನಿರ್ವಾಹಕ ಕಾಶೀನಾಥ್ ಎಂಬಾತನ ಮೇಲೆ ದೂರು ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರೇಶ್, ಅಶ್ವಿನಿ, ಗ್ರಾಮಸ್ಥರಾದ ರಾಘವೇಂದ್ರ, ನಾಗೇಂದ್ರ, ವಿಶ್ವನಾಥ್, ಮಂಜುನಾಥ್ ಎಂಬುವವರು ಪ್ರಕರಣ ಬೆಳಕಿಗೆ ತಂದಿದ್ದಾರೆ.

error: Content is protected !!