ನುಡಿತೇರಿಗೆ ಚಾಲನೆ, ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ವಿಶೇಷತೆಗಳು ಇಲ್ಲಿವೆ

ಸುದ್ದಿ ಕಣಜ.ಕಾಂ | DISTRICT | SAHITYA SAMMELANA
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ.

READ | ಮಾ.30, 31ರಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಈ ಸಲದ ಸರ್ವಾಧ್ಯಕ್ಷರು ಯಾರು, ಏನು ವಿಶೇಷ

 1. ಪುಸ್ತಕಗಳ ಮಳಿಗೆಗಳ ಆಕರ್ಷಣೆ
  ಸಮ್ಮೇಳನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಒಟ್ಟು ಎಂಟು ಮಳಿಗೆಗಳನ್ನು ಸ್ಥಾಪಿಸಿದ್ದು, ಅದರಲ್ಲಿ ನಾಲ್ಕು ಪುಸ್ತಕದ್ದಾಗಿವೆ. ಸಮ್ಮೇಳನವೆಂದ ಮೇಲೆ ಪುಸ್ತಕಗಳು ಇರಲೇಬೇಕು. ಇಲ್ಲಿಯೂ ಸಹ ಹಲವು ಪ್ರಕಾಶನಗಳು ಬಂದಿದ್ದು, ಹೊಸ ಕೃತಿಗಳು ಲಭ್ಯ ಇವೆ. ಮಕ್ಕಳ ಕಥೆಗಳು, ಕಾದಂಬರಿ, ಮಹಾನೀಯರ ಜೀವನ ಚರಿತ್ರೆಯ ಪುಸ್ತಕಗಳು ಲಭ್ಯ ಇವೆ. ಒಟ್ಟಾರೆ ಸಾರಸ್ವತ ಲೋಕವೇ ಇಲ್ಲಿದೆ. ಕಾಳಿಂಗ ಪ್ರಕಾಶನ, ಅಹರ್ನಿಶಿ ಪ್ರಕಾಶನ, ವಿಜಯವಾಹಿನಿ ಪ್ರಕಾಶನಗಳು ಸಮ್ಮೇಳನದಲ್ಲಿ ಮಳಿಗೆಗಳನ್ನು ಸ್ಥಾಪಿಸಿವೆ.
 2. ಮನಮೋಹಕ ವಸ್ತ್ರವಿನ್ಯಾಸ
  ಒಂದೆಡೆ ಪುಸ್ತಕಗಳಿದ್ದರೆ ಮತ್ತೊಂದೆಡೆ ಸ್ವದೇಶಿ ವಸ್ತ್ರೋದ್ಯಮದಿಂದ ಮಳಿಗೆಯನ್ನು ಹಾಕಲಾಗಿದೆ. ಇಲ್ಲಿ ಭಿನ್ನ ಭಿನ್ನ ವಿನ್ಯಾಸದ ಬಟ್ಟೆಗಳು ಲಭ್ಯ ಇವೆ.
 3. ಸಾಹಿತ್ಯ ಗ್ರಾಮದಲ್ಲಿ ಹಬ್ಬದ ವಾತಾವರಣ
  ಸಾಹಿತ್ಯ ಗ್ರಾಮದಲ್ಲಿ ಇಂದು ಬೆಳಗ್ಗೆಯಿಂದ ನಿರಂತರವಾಗಿ ಪ್ರೊ.ಕೃಷ್ಣೇಗೌಡರಂತಹ ವಾಗ್ಮಿಗಳಾದಿಯಾಗಿ ಸಾಹಿತಿಗಳು ಕನ್ನಡ ಭಾಷೆ, ನೆಲ, ಸಂಸ್ಕೃತಿ, ಪರಂಪರೆ, ಭಾಷೆಯ ಉಳಿವಿಗೆ ಕನ್ನಡಿಗರಿಂದ ಆಗಬೇಕಾದ ಅಂಶಗಳ ಕುರಿತು ಮಾತನಾಡಿದರು.
 4. ಬಿಸಿಲನ್ನೂ ಲೆಕ್ಕಿಸಿದೇ ಆಗಮಿಸಿದ ಸಾಹಿತ್ಯಾಸಕ್ತರು
  ಸಾಹಿತ್ಯ ಗ್ರಾಮ ನಗರದಿಂದ ದೂರವಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದಾರೆ. ಬಿರು ಬಿಸಿಲನ್ನೂ ಲೆಕ್ಕಿಸದೇ ಸಾರ್ವಜನಿಕರು ಆಗಮಿಸಿ ಸಮ್ಮೇಳನದ ಗೋಷ್ಠಿಗಳನ್ನು ಆಲಿಸಿದರು.
 5. ಸಮ್ಮೇಳನಕ್ಕೆ ಬರುವವರಿಗೆ ಬಸ್ ವ್ಯವಸ್ಥೆ
  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಡೆಯುತ್ತಿರುವ ಸಮ್ಮೇಳನ ಮಾರ್ಚ್ 30 ಮತ್ತು 31 ರಂದು ನಡೆಯಲಿದೆ. ಅದದಕ್ಕಾಗಿ ಸಾಹಿತ್ಯ ಗ್ರಾಮ ಮತ್ತು ಗೋಪಾಳಕ್ಕೆ ಬರುವ ಬಸ್ ಗಳು ಸಾಹಿತ್ಯ ಗ್ರಾಮದವರೆಗೆ ಬಂದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರವಾಗಿ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಮಳಿಗೆ