Shimoga Dasara | ಶಿವಮೊಗ್ಗ ದಸರಾ ಆಚರಣೆ ಬಗ್ಗೆ ಸಿಎಂ ಭೇಟಿ ಮಾಡಿದ‌ ಮಹಾನಗರ ಪಾಲಿಕೆ‌ ಸರ್ವಸದಸ್ಯರು, ಪ್ರಮುಖ 3 ಡಿಮ್ಯಾಂಡ್’ಗಳೇನು?

Shivamogga dasara 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಭೇಟಿ ಮಾಡಿರುವ ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ಸರ್ವ ಸದಸ್ಯರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

shivamogga dasara
ಸಿಎಂ ಸಿದ್ದರಾಮಯ್ಯಗೆ ಶಿವಮೊಗ್ಗ ಮಹಾನಗರ ಪಾಲಿಕೆ ಸರ್ವ ಸದಸ್ಯರ ನಿಯೋಗ ಭೇಟಿ.

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫಸ್ಟ್ ಫ್ಲೈಟ್ ಹೇಗಿತ್ತು ರೆಸ್ಪಾನ್ಸ್?

ಸಿಎಂಗೆ ಸಲ್ಲಿಸಿದ ಬೇಡಿಕೆಗಳೇನು?

  1. ಶಿವಮೊಗ್ಗ ದಸರಾ ಉತ್ಸವ (Shimoga dasara utsava) ಆಚರಣೆಗೆ ರಾಜ್ಯ  ಸರ್ಕಾರದಿಂದ ₹1.50 ಕೋಟಿ ಮಂಜೂರು ಮಾಡಬೇಕು.
  2. ಸಕ್ರೆಬೈಲು‌ ಆನೆಬಿಡಾರದಿಂದ ಮೂರು ಆನೆಗಳನ್ನು ನೀಡಬೇಕು.
  3. ಈ ಸಲ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಾಗಿ, ಅಗತ್ಯ ಅನುದಾನ ಶೀಘ್ರವೇ ಮಂಜೂರು ಮಾಡಬೇಕು.

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೀಶ್, ನಾಗರಾಜ ಕಂಕಾರಿ,ಸುವರ್ಣ ಶಂಕರ್,ಭಾನುಮತಿ ವಿನೋದ್ , ಧೀರರಾಜ್ ಹೊನ್ನವಿಲೆ, ವಿಶ್ವಾಸ್ , ಎಸ್ ಜಿ ರಾಜು, ಆರ್.ಸಿ. ನಾಯ್ಕ್,  ಹಾಗೂ ಪ್ರಮುಖರಾದ ಶಂಕರ ನಾಯ್ಕ, ಕೆ. ರಂಗನಾಥ್ ಇನ್ನಿತರರಿದ್ದರು.

Malnad agriculture | ಮಲೆನಾಡಿನ ಬೆಳೆಗಳ ಮೇಲೆ ಬರದ ಛಾಯೆ, ಅನ್ನದ ಬಟ್ಟಲಿಗೆ ಬೆಂಕಿ!

error: Content is protected !!