ಆಯನೂರು ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ, ಹೆಂಚು, ಸೋಲಾರ್ ಪ್ಯಾನಲ್ ಜಖಂ

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ತಾಲೂಕಿನ ಆಯನೂರು ಸುತ್ತಮುತ್ತ ಮಂಗಳವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ಸಾಕಷ್ಟು ಹಾನಿಯುಂಟಾಗಿದೆ.
ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆಯ ಹೊತ್ತಿಗೆ ಏಕಾಏಕಿ ಆಲಿಕಲ್ಲು ಸಹಿತ ಜೋರು ಮಳೆ ಸುರಿಯಲು ಆರಂಭಿಸಿದೆ. ಜನರು ಇದರಿಂದ ತಪ್ಪಿಸಿಕೊಳ್ಳಲು ಮರ ಮತ್ತು ಕಟ್ಟಡಗಳ ಆಶ್ರಯ ಪಡೆದ ದೃಶ್ಯಗಳು ಕಂಡುಬಂದಿವೆ.

READ | ಭಾರತೀಪುರ ಕ್ರಾಸ್ ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್, ಯಾವ ಕಾಮಗಾರಿಗೆಷ್ಟು ಅನುದಾನ

ಮನೆಯ ಹೆಂಚು, ಸೋಲಾರ್ ಪ್ಯಾನಲ್ ಜಖಂ
ಆಯನೂರು ಆಸುಪಾಸು ಆಲಿಕಲ್ಲು ಮಳೆಯು ಭಾರಿ ನಷ್ಟ ಉಂಟುಮಾಡಿದೆ. ಚನ್ನಹಳ್ಳಿ ಗ್ರಾಮದ ಮನೆ ಮೇಲಿನ ಹೆಂಚುಗಳು ಮತ್ತು ಸೋಲಾರ್ ಪ್ಯಾನಲ್ ಹಾಳಾಗಿವೆ. ಬಾಳೆ, ಅಡಿಕೆ ತೋಟಕ್ಕೂ ಹಾನಿಯಾಗಿದೆ.

error: Content is protected !!