KIOCL Recruitment, ವಿವಿಧ ಹುದ್ದೆಗಳ ನೇಮಕಾತಿ, ಮಾಸಿಕ 1.20 ಲಕ್ಷ ರೂ.ವರೆಗೆ ಸಂಬಳ, ನೇರ ಸಂದರ್ಶನ ಮೂಲಕ ಆಯ್ಕೆ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ (KIOCL Recruitment 2022)ನಲ್ಲಿ ಒಟ್ಟು 9 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿ(Bangalore)ನಲ್ಲಿ ಉದ್ಯೋಗ ಹುಡುಕಾಟ(job search)ದಲ್ಲಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏಪ್ರಿಲ್ 12 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೂರ್ತಿ ಸುದ್ದಿ ಓದಿ.

JOBS FB Link

ನೇಮಕಾತಿ ಸಂಸ್ಥೆ ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್  (KIOCL)
ಹುದ್ದೆಗಳ ಸಂಖ್ಯೆ 30,000ದಿಂದ 1,20,000 ರೂಪಾಯಿ
ಹುದ್ದೆ ಹೆಸರು ಸಹಾಯಕ ಸಿವಿಲ್ ಎಂಜಿನಿಯರ್, ಮೆಕ್ಯಾನಿಕಲ್ ಎಂಜಿನಿಯರ್
ಉದ್ಯೋಗ ಸ್ಥಳ ಬೆಂಗಳೂರು
ನೇಮಕಾತಿ ಮಾಡಲಾಗುತ್ತಿರುವ ಹುದ್ದೆಗಳ ವಿವರ
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಮೆಕ್ಯಾನಿಕಲ್ ಎಂಜಿನಿಯರ್ 4
ಎಲೆಕ್ಟ್ರಿಕಲ್ ಎಂಜಿನಿಯರ್ 2
ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ 1
ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ 2

ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ, ಅನುಭವ

  • ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ಹುದ್ದೆಗೆ ಮೆಕ್ಯಾನಿಕಲ್’ನಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 3 ವರ್ಷಗಳ ಅನುಭವ ಹೊಂದಿರಬೇಕು. ಯಾವ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು ಎಂಬ ಬಗ್ಗೆ ತಿಳಿದುಕೊಳ್ಳಲು ಅಧಿಸೂಚನೆಯನ್ನು ಓದಿ.
  • ಎಲೆಕ್ಟ್ರಿಕಲ್ ಎಂಜಿನಿಯರ್ (Electrical Engineer)ಹುದ್ದೆಗೆ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. 3 ವರ್ಷಗಳ ಅನುಭವ.
  • ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ (Instrumentation and Control Engineer) ಹುದ್ದೆಗೆ ಇನ್ ಸ್ಟ್ರುಮೆಂಟೇಷನ್/ ಕಂಟ್ರೋಲ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. 3 ವರ್ಷ ಅನುಭವ
  • ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ (Assistant Civil Engineer) ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಾಸಾಗಿರಬೇಕು. 3 ವರ್ಷ ಅನುಭವ.

ವಯೋಮಿತಿ, ಆಯ್ಕೆ ವಿಧಾನ
ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗೆ ಗರಿಷ್ಠ 35 ವರ್ಷ ಹಾಗೂ ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್, ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ ಹುದ್ದೆಗೆ ಗರಿಷ್ಠ 32 ವರ್ಷ. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲೀಕರಣ ನೀಡಲಾಗಿದೆ.
ಸಂಬಂಧಪಟ್ಟ ಹುದ್ದೆಗಳಿಗೆ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ 30-03-2022
ಎಲೆಕ್ಟ್ರಿಕಲ್ ಎಂಜಿನಿಯರ್, ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ 11-04-2022
ಮೆಕ್ಯಾನಿಕಲ್ ಎಂಜಿನಿಯರ್,  ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ 12-04-2022

NOTIFICATION

OFFICIAL WEBSITE

error: Content is protected !!