ಹೊಳಲೂರು ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಇನ್ನೇನು ಕಾರ್ಯಕ್ರಮ

 

 

ಸುದ್ದಿ ಕಣಜ.ಕಾಂ | DISTRICT | PM MODI VISIT
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24ರಂದು ಹೊಳಲೂರು ಗ್ರಾಮ ಪಂಚಾಯಿತಿಗೆ ಆಗಮಿಸಲಿದ್ದಾರೆ. ಅಂದು ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಹೊಳಲೂರಿಗೆ ಭೇಟಿ ನೀಡಿದ ಈಶ್ವರಪ್ಪ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
15 ಎಕರೆಯಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ
ಹೊಳಲೂರು ಗ್ರಾಮದಲ್ಲಿ 15 ಎಕರೆ ಜಾಗದಲ್ಲಿ 5 ಎಕರೆಯನ್ನು ಹೆಲಿಪ್ಯಾಡ್ ನಿರ್ಮಾಣಕ್ಕೆ ಹಾಗೂ ಉಳಿದ 10 ಎಕರೆಯಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಸ್ಥಳ ಆಯ್ಕೆಯೊಂದೇ ಬಾಕಿ ಇದೆ ಎಂದು ತಿಳಿಸಿದರು.

READ | ಶಿವಮೊಗ್ಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಗೆ ಭರ್ಜರಿ ರೆಸ್ಪಾನ್ಸ್, ಥಿಯೇಟರ್ ನಲ್ಲಿ ಸೀಟು ಸಿಗದೇ ವಾಪಸ್, ಮತ್ತೆರಡು ದಿನ ಉಚಿತ ಶೋ

ಏನೇನು ಕಾರ್ಯಕ್ರಮ
ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಆಗಮಿಸುವರು. ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಭಾಷಣ ಮಾಡಲಿದ್ದಾರೆ. ಇದೆಲ್ಲದಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಧಿವೇಶನ ನಂತರ ಮತ್ತೊಮ್ಮೆ ಹೊಳಲೂರಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಆರ್.ಡಿ.ಪಿ.ಆರ್. ಆಯುಕ್ತೆ ಶಿಲ್ಪಾ ನಾಗ್, ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್‍ಪಿ ಲಕ್ಷ್ಮೀಪ್ರಸಾದ್, ಜಿ.ಪಂ. ಸಿಇಓ ಎಂ.ಎಲ್. ವೈಶಾಲಿ ಉಪಸ್ಥಿತರಿದ್ದರು.

https://www.suddikanaja.com/2022/03/08/prime-ministed-narendra-modi-official-visit-to-shimoga-central-official-visited-holalur/

error: Content is protected !!