ಸುದ್ದಿ ಕಣಜ.ಕಾಂ | DISTRICT | THE KASHMIR FILES
ಶಿವಮೊಗ್ಗ: ರಾಷ್ಟ್ರದಾದ್ಯಂತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಭಾರಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಇದರದ್ದೇ ಸದ್ದು ಜೋರಾಗಿದೆ. ಇದರ ನಡುವೆ ಶಿವಮೊಗ್ಗದಲ್ಲಿ ಮಂಗಳವಾರ ಪ್ರದರ್ಶನಗೊಂಡ ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಉಚಿತವಾಗಿ ಪ್ರದರ್ಶನಗೊಂಡ ಚಿತ್ರವನ್ನು ವೀಕ್ಷಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಆಗಮಿಸಿದ್ದರು.
VIDEO REPORT
READ | ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ನಲುಗಿದ ಜನ, ಸುಟ್ಟು ಭಸ್ಮವಾದ ಮನೆ
ಸಚಿವರು ಕುಟುಂಬ ಸಹಿತ ವೀಕ್ಷಣೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುಟುಂಬ ಸಮೇತ `ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಅವರು ಸಹ ಈ ವೇಳೆ ಬಂದಿದ್ದರು.
ಇನ್ನೆರಡು ದಿನ ಉಚಿತ ಪ್ರದರ್ಶನ
ಚಿತ್ರವನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಚಿತ್ರ ಮಂದಿರ ಹೌಸ್ ಫುಲ್ ಆಗಿತ್ತು. ಹಾಗಾಗಿ, ಸಾಕಷ್ಟು ಜನ ಪರ್ಯಾಯ ಮಾರ್ಗವಿಲ್ಲದೇ ವಾಪಸ್ ಹೋದರು. ಜನರ ಅನುಕೂಲಕ್ಕಾಗಿ ಇನ್ನೂ ಎರಡು ದಿನ (ಮಾ.17, 18ರಂದು) ಸಂಜೆ 5.30ಕ್ಕೆ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಪ್ರೇಕ್ಷಕರು ಇದರ ಪ್ರಯೋಜನ ಪಡೆಯಬಹುದು.
https://www.suddikanaja.com/2021/11/07/shivamogga-zoo-bring-hippopotamus-from-mysuru/