ಮಾನಸ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕ್ವಿಜ್ ಮೇಳ, ಗಮನ ಸೆಳೆದ ಡೈನಾಸಾರ್, ಲೈವ್ ಎನಿಮಲ್ಸ್

 

 

ಸುದ್ದಿ ಕಣಜ.ಕಾಂ | TALUK | EDUCATION CORNER 
ಶಿವಮೊಗ್ಗ: ತಾಲೂಕಿನ ಕೋಟೆಗಂಗೂರಿನಲ್ಲಿರುವ ಮಾನಸ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಮಾನಸ ಇಂಟರ್ ನ್ಯಾಷನಲ್ ಐಸಿಎಸ್‍ಇ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ವಿಜ್ ಮೇಳದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾನಸ ವಿಜ್ಞಾನ ಮತ್ತು ಆರ್ಟ್-ಕ್ರಾಫ್ಟ್ ಫೆಸ್ಟ್ 2022ರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಾಕಷ್ಟು ಹೊಸ ವಿಚಾರಗಳನ್ನು ಕಲಿತರು. ಕ್ವಿಜ್ ಮಾತ್ರವಲ್ಲದೇ ಡೈನಾಸಾರ್ ಮತ್ತು ಲೈವ್ ಎನಿಮಲ್ಸ್ ಕೂಡ ಏರ್ಪಡಿಸಲಾಗಿತ್ತು. ಇದು ವೀಕ್ಷಕರ ಗಮನ ಸೆಳೆಯಿತು.

Manasa
ಮಾನಸ ಇಂಟರ್ ನ್ಯಾಷನಲ್ ಐಸಿಎಸ್‍ಇ ಶಾಲೆಯ ಸಿಬ್ಬಂದಿ

READ | KPSC Recruitment, ಪೊಲೀಸ್ ಇಲಾಖೆಯಲ್ಲಿ ‘ಎ’ ವೃಂದದ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

ಗಮನ ಸೆಳೆದ ವಿದ್ಯಾರ್ಥಿಗಳ ಮಾಡಲ್ಸ್
ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ತಯಾರಿಸಿದ್ದರು. ಪಠ್ಯದಲ್ಲಿ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವ ಮೂಲಕ ಮಕ್ಕಳು ಜಾಣ್ಮೆ ತೋರಿಸಿದರು. ಮಾದರಿಗಳನ್ನು ವೀಕ್ಷಿಸಲು ಬಂದವರಿಗ ತಮ್ಮ ಮಾದರಿಯನ್ನು ವಿವರಿಸಿದರು.
ಕ್ವಿಜ್ ಮೇಳವನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಕವಿತಾರಾಣಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ಜನಾರ್ಧನ್, ಪ್ರಾಂಶುಪಾಲರು, ಆಡಳಿತ ಮಂಡಳಿ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

https://www.suddikanaja.com/2021/12/05/kartika-deepotsava-at-sagara/

error: Content is protected !!